

ಮಂಗಳೂರು : ನಗರದಲ್ಲಿ ಪರ್ಮಿಟ್ ಆಟೋ ರಿಕ್ಷಾ ಹಾಗೂ ಬ್ಯಾಟರಿ ಚಾಲಿತ ರಿಕ್ಷಾಗಳ ಮಧ್ಯೆ ಇರುವ ಗೊಂದಲಕ್ಕೆ ತಮಿಳುನಾಡು ಮಾದರಿ ಸೂತ್ರವನ್ನು ಅನುಸರಿಸುವಂತೆ ಶಾಸಕ ವೇದವ್ಯಾಸ ಕಾಮತ್ ಸರ್ಕಾರವನ್ನು ವಿನಂತಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ‘ ಮಂಗಳೂರು ನಗರದಲ್ಲಿ ಆಟೋಗಳ ನಡುವಿನ ಗೊಂದಲ ವಿಪರೀತ ಹಂತಕ್ಕೆ ತಲುಪಿದೆ. ಪ್ರತಿಭಟನೆಗಳಿಂದ ಪೊಲೀಸ್ ಇಲಾಕೆ, ಸಾರಿಗೆ ಇಲಾಖೆ ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಗೊಂದಲಗಳಿಗೆ ಪರಿಹಾರ ಸೂತ್ರವಾಗಿ ರಿಕ್ಷಾ ಚಾಲಕ-ಮಾಲಕ ಅಸೋಸಿಯೇಷನ್‌ಗಳೇ ತಮಿಳುನಾಡು ಮಾದರಿಗೆ ಬೇಡಿಕೆ ಇರಿಸಿವೆ . ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಮಿಳುನಾಡು ಮಾದರಿಯ ವರದಿಯನ್ನು ತರಿಸಿ ತಕ್ಷಣ ರಾಜ್ಯಕ್ಕೂ ಅನ್ವಯಿಸುವಂತೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
.....................