ಭಾರತ ಹೆಸರು ಶಾಶ್ವತವಾಗಿರಲಿ - ಶಾಸಕ ವೇದವ್ಯಾಸ ಕಾಮತ್

allwyn_130820_kamath
Published on



ಮಂಗಳೂರು : ಭಾರತ ಎನ್ನುವ ಸ್ವದೇಶಿ ಹೆಸರಿನ ಬದಲು ಇಂಡಿಯಾ ಎಂಬ ಹೆಸರನ್ನು ಅಚ್ಚು ಹಾಕಿಸಿದ್ದು ಬ್ರಿಟಿಷ್ ಆಡಳಿತ.
ಈಗ ಮೋದಿ ಸರ್ಕಾರ ಈ ಹೆಸರನ್ನು ಅಳಿಸಿ ’ಭಾರತ’ ಎಂದು ಬದಲಾಯಿಸಲು ಹೊರಟಿರುವ ದಿಟ್ಟ ನಿರ್ಧಾರ ಸ್ವಾಗತಾರ್ಹ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಇಂಡಿಯಾ ಎಂಬ ಪದದ ಬದಲಾಗಿ ಭಾರತ ಎಂಬ ಹೆಸರನ್ನು ಎಲ್ಲ ದಾಖಲೆಗಳಲ್ಲಿ ಶಾಶ್ವತವಾಗಿ ಬದಲಾಯಿಸಬೇಕು .ಇಂಡಿಯಾ ಎಂಬ ಪದವು ದಾಸ್ಯದ ಸಂಕೇತವಾಗಿದೆ. ಶತಮಾನಗಳ ಕಾಲ ಭಾರತವನ್ನು ಲೂಟಿ ಮಾಡಿದ ವಿದೇಶಿಯರು ಈ ನಾಡಿಗೆ ಇಟ್ಟ ಹೆಸರು ಇದಾಗಿದೆ. ಹಾಗಾಗಿ ಶತ, ಶತಮಾನಗಳಿಂದ ಬಂದ ಹೆಸರಾಗಿರುವ ’ಭಾರತ’ ಎಂಬ ಹೆಸರನ್ನು ಶಾಶ್ವತವಾಗಿ ದಾಖಲೆಯಲ್ಲಿ ಅಳವಡಿಸಬೇಕು. ವಿದೇಶಿ ವ್ಯಾಮೋಹ ಇರುವವರು ಈಗ ಭಾರತ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net