ಸನ್ಮಾರ್ಗದಲ್ಲಿ ಸಾಗಲು ಬೇಕು ಗುರುವಿನ ಆಶೀರ್ವಾದ

03
Published on

ನೊಣವಿನಕೆರೆ : ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭಾನುವಾರ ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.

ಬೆಳಗ್ಗೆ 11 ಗಂಟೆಗೆ ಆಗಮಿಸಿದ ಸಚಿವ ಸೋಮಣ್ಣ, ಗುರುಭವನಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದು ನಂತರ ಕಾಡಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜೆ, ಸಂಕಲ್ಪ ಹಾಗೂ ಮಂಗಳಾರತಿ ನೆರವೇರಿಸಿದರು.

ಎಲ್ಲೆಡೆ ಕರೊನಾ ಸೋಂಕು ಹೆಚ್ಚುತ್ತಿರುವುದರಿಮದ ಶ್ರೀಗಳು ರಾಜ್ಯವು ಕರೊನಾಮುಕ್ತವಾಗಲೆಂದು ಸಂಕಲ್ಪ ಮಾಡಿದ್ದಾರೆ. ಗುರುವಿನ ಸಂದೇಶ ಪಾಲಿಸುವವರು ಸಮಾಜದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ನೊಣವಿನಕೆರೆ ಶ್ರೀಗಳ ಗುರುಗಳಾದ ಲಿಂಗೈಕ್ಯ ಶ್ರೀವೀರಗಂಗಾಧರ ಸ್ವಾಮಿಗಳು ಹಾಗೂ ಕಾಡಸಿದ್ದೇಶ್ವರರ ಆಶೀರ್ವಾದದಿಂದ ನಾಡಿನಾದ್ಯಂತ ನೊಣವಿನಕೆರೆ ಮಠದ ಶ್ರೀಗಳ ನಿರಂತರಸೇವೆ ನಡೆಯುತ್ತಿದ್ದು, ಗುರು ಪೂರ್ಣಿಮೆಯಂದು ಕರೊನಾದಿಂದ ಮುಂದಿನ ಕಷ್ಟದ ದಿನಗಳು ತೊಲಗಲಿ ಎಂದು ಆಶೀರ್ವಾದ ಪಡೆದಿದ್ದೇನೆ ಎಂದರು.

ಗುರುಪೂರ್ಣಿಮೆ ಪವಿತ್ರ ದಿನದಂದು ಗುರುವಿನ ಶ್ರೇಷ್ಟತೆ, ಮಹಿಮೆಗಿಂತ ಅಧಿಕವಾದ ವಸ್ತು ಜಗತ್ತಿನಲ್ಲಿಲ್ಲ. ಮಾನವೀಯತೆಯ ಮೌಲ್ಯ ಕಾಪಾಡುವಲ್ಲಿ ಗುರುವಿನ ಆಶೀರ್ವಾದ ಮುಖ್ಯ. ಭಗವಂತ ಹಾಗೂ ಗುರುಗಳ ಆಶೀರ್ವಾದದಿಂದ ಆರೋಗ್ಯ ಭಾಗ್ಯದ ತೆಗೆ ಕರೊನಾ ವಿರುದ್ಧ ಹೋರಾಟ ಮಾಡುವ ಶಕ್ತಿ ದೊರೆಯಲಿ ಎಂದು ಶ್ರೀಕರಿವೃಷದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ ತಿಳಿಸಿದರು.

ಸಾಮಾಜಿಕ ಬದುಕಿನಲ್ಲಿ ಎಲ್ಲರ ಜೀವನದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಎಲ್ಲರ ಜೀವನದಲ್ಲಿ ಸಂಸ್ಕಾರ ಕೊಟ್ಟ ಗುರುವಿಗೆ ವಂದಿಸಿ ಈ ದೇಶಕ್ಕೆ ಬೆಳಕಾಗುವ ಮಾರ್ಗದಲ್ಲಿ ನಡೆಯೋಣ.

ವಿರುಪಾಕ್ಷ ಪಂಡಿತಾರಾಧ್ಯಸ್ವಾಮೀಜಿ ಕಲ್ಲಮಠ, ಮಾನ್ವಿ, ರಾಯಚೂರು ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net