ಜನರ ಸಮಸ್ಯೆ ಆಲಿಸಿದ ಶಾಸಕ ಟಿ.ಎಸ್.ಶ್ರೀವತ್ಸ

20
Published on

ಶಾಸಕ ಟಿ.ಎಸ್.ಶ್ರೀವತ್ಸ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ನಾನಾ ಬಡಾವಣೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು.


ಕ್ಷೇತ್ರ ವ್ಯಾಪ್ತಿಯ ಹುಲ್ಲಿನಬೀದಿ, ಹೊಸಕೇರಿ, ಮಾಧ್ವಚಾರ್ ರಸ್ತೆ, ಸೀತಾ ರಾಮರಾವ್ ರಸ್ತೆ, ಬಸವೇಶ್ವರ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ ಶಾಸಕರಿಗೆ ಬಡಾವಣೆಯ ಸಮಸ್ಯೆಗಳು ದರ್ಶನವಾದವು. ಸಾರ್ವಜನಿಕರು ನೀರು, ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ನಗರಪಾಲಿಕೆ ಸದಸ್ಯೆ ಸೌಮ್ಯಾ ಉಮೇಶ್, ಮುಖಂಡರಾದ ಅರುಣ್, ಗುರುದತ್, ಶಂಕರ್ ಸಿಂಗ್, ದೀನಮಣಿ, ಅನ್ನಪೂರ್ಣ, ಕಿಶೋರ್, ಉಷಾ, ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net