ನೈಜ ಕಾರ್ಮಿಕರಿಗೆ ಸವಲತ್ತು ಸಿಗ ಬೇಕು

IMG-20201201-WA0053.jpgNN
Published on

ಚಿತ್ರದುರ್ಗ: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಲು ನೆರವಾಗುವ ಮೂಲಕ ಕಾರ್ಮಿಕರಿಗೆ,ಇಲಾಖೆಯಿಂದ ದೊರೆಯು ವ ಸವಲತ್ತನ್ನು ಒದಗಿಸಲು ಶ್ರಮಿಸುವಂತೆ ಕಾರ್ಮಿಕ ಮುಖಂಡರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು. ನಗರದ ಹೊಳಲ್ಕೆರೆ ರಸ್ತೆಯಲ್ಲಿ ಸಮೃದ್ಧಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು,ನೋಂದಣಿ ಚುರುಕುಗೊಳಿಸ ಬೇಕು ಹಾಗೂ ಸವಲತ್ತುಗಳು ನೈಜ ಕಾರ್ಮಿಕರಿಗೆ ಸಿಗುವಂತಾಗಬೇಕೆಂದರು.
ತಾಲೂಕಿಗೆ ಇನ್ನು 10 ಸಾವಿರ ಕೋವಿಡ್ ಪರಿಹಾರ್ಥ ಆಹಾರ ಧಾನ್ಯಗಳ ಕಿಟ್ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿರುವುದಾಗಿ ಇದೇ ವೇಳೆ ತಿಳಿಸಿದರು.ಕಾರ್ಮಿಕ ಅಧಿಕಾರಿ ಡಿ.ರಾಜಣ್ಣ ಇಲಾಖೆಯಿಂದ ಕಾರ್ಮಿ ಕರಿಗೆ ಸಿಗುವ ನಾನಾ ಸವಲತ್ತುಗಳ ಕುರಿತು ವಿವರಿಸಿ ದರು. ಸಂಘದ ಅಧ್ಯಕ್ಷ ಎನ್.ರಮೇಶ್,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್,ಉಪಾಧ್ಯಕ್ಷೆ ಶ್ವೇತಾ ವಿರೇಶ್,ಸದಸ್ಯ ಶಶಿಧರ್,ಕಾರ್ಮಿಕ ನಿರೀಕ್ಷಕಿ ಟಿ.ಕುಸುಮ,ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸತೀಶ್ ಹಾಗೂ ಮುಖಂಡ ಎಂ.ಭೈರೇಶ್ ಮತ್ತಿತತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net