

ಹುಬ್ಬಳ್ಳಿ: ಶಾಸಕರಾಗಿ ಒಂದು ವರ್ಷದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿರುವ ಮಹೇಶ ಟೆಂಗಿನಕಾಯಿ ಅವರನ್ನು ನಗರದ ಗಣ್ಯರು ಅಭಿನಂದಿಸಿದರು.
ಸಮಾಜಸೇವಕ ವಿನೋದಕುಮಾರ ಪಟ್ವಾ, ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದಶಿರ್ ದತ್ತಮೂರ್ತಿ ಕುಲಕರ್ಣಿ, ಸಂಜೀವ ಜೋಶಿ ಮತ್ತು ವಕೀಲ ಲಕ್ಷ್ಮಣ ಕುಲಕರ್ಣಿ ಇತರರು ಗೌರವಿಸಿದರು.
ಶಾಸಕರು ಕ್ಷೇತ್ರದಲ್ಲಿ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು ಎಂದು ತಿಳಿಸಲಾಗಿದೆ.