

ಹುಬ್ಬಳ್ಳಿ : ನಗರದಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಹಾನಿಯಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಗುರುವಾರದಂದು ಭೇಟಿ ನೀಡಿ, ಪರಿಶೀಲಿಸಿದರು.
ವಾರ್ಡ್ ನಂ. 44 ರ ಕುಸುಗಲ್ ರಸ್ತೆಯ ಅರಿಹಂತ ಹೆರಿಟೇಜ್, ವಾರ್ಡ್ 48ರ ಶ್ರೀ ಓಂ ಹೆರಿಟೇಜ್, ಸಿದ್ದೇಶ್ವರ ಪಾರ್ಕ್ ಹಾಗೂ ವಾರ್ಡ್ 54ರ ಹಲವು ಪ್ರದೇಶಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಆಗಿರುವ ಅನಾನುಕೂಲತೆ ಮತ್ತು ಕೆಲವು ಅಪಾರ್ಟಮೆಂಟ್ಗಳಿಗೆ, ಮನೆಗಳಿಗೆ ಹಾಗೂ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ತಕ್ಷಣ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚಿಸಿದರು.
ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಸದಸ್ಯೆ ಉಮಾ ಮುಕುಂದ, ರವಿರಾಜ ಕೊಡ್ಲಿ, ಲಿಂಗರಾಜ ಬೆಳಗಟ್ಟಿ ಹಾಗೂ ಇತರರು ಹಾಜರಿದ್ದರು.
<p