ವೈಯಕ್ತಿಕ ಅಸಮಾಧಾನಕ್ಕೆ ಜಾತಿ ಬಣ್ಣ ಬೇಡ

MT NEW
Published on

ಹುಬ್ಬಳ್ಳಿ : ಏನೇ ಅಸಮಾಧಾನ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಹೇಳಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಜಾತಿಯನ್ನು ಕಡೆಗಣಿಸಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾದವರಲ್ಲಿ ಲಿಂಗಾಯತರೇ ಹೆಚ್ಚಿನವರು ಎಂದರು. ಇಷ್ಟು ದಿನ ಇಲ್ಲದ ಜಾತಿ ವಿಷಯ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಬಿಜೆಪಿಯಲ್ಲಿ ಎಲ್ಲ ಜಾತಿಯವರೂ ಸಮಾನರು. ಯಾವುದೇ ವ್ಯಕ್ತಿಗೆ ಅಸಮಾಧಾನ ಇದ್ದರೆ ಅದು ಆ ವ್ಯಕ್ತಿಯ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು. ತನ್ನ ಕಡೆಗಣನೆಯನ್ನು ಜಾತಿಯ ಕಡೆಗಣನೆ ಎಂದು ಯಾರೂ ಪರಿಗಣಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net