ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಟೆಂಗಿನಕಾಯಿ ಭೇಟಿ

New Tenginakayi
Published on

ಹುಬ್ಬಳ್ಳಿ : ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ತೊಂದರೆಗೀಡಾದ ಪ್ರದೇಶಗಳಲ್ಲೊಂದಾದ 52ನೇ ವಾರ್ಡ್​ನ ಜಗದೀಶ ನಗರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶುಕ್ರವಾರ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು.

ಪಾಲಿಕೆ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕರು ಸೂಚಿಸಿದರು.

ವಾರ್ಡ್ ಅಧ್ಯಕ್ಷ ಹರೀಶ ಜಂಗಲಿ, ಮಂಜುನಾಥ ಬ್ಯಾಡಗಿ, ಕಿಶನ್ ಬಿಲಾನಾ, ನಾಗರಾಜ ಕಟ್ಟಿಮನಿ, ಪಕ್ಕೀರಪ್ಪ ಶ್ರವಣ, ಮಂಜುನಾಥ ಮುದ್ದಿ, ರಾಮಚಂದ್ರ ದೊಡ್ಡಮನಿ, ಗೀತಾ ಮುದ್ದಿ, ಮಂಜುಳಾ ವಜ್ಜಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net