ಬೂತ್​ ಬಲಿಷ್ಠಗೊಳಿಸಲು ಶಾಸಕ ಟೆಂಗಿನಕಾಯಿ ಸಲಹೆ

New Tenginakayi new
Published on

ಹುಬ್ಬಳ್ಳಿ : ವಿಶ್ವದ ಅತಿ ದೊಡ್ಡ ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷ ಬಿಜೆಪಿ. ಇಂತಹ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ ಬಿಜೆಪಿಯ ವಿವಿಧ ಮೋರ್ಚಾಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಹುದ್ದೆಗಾಗಿ ಕೆಲಸ ಮಾಡಬಾರದು. ಪಕ್ಷ ನೀಡಿರುವ ಕಾರ್ಯವನ್ನು ಜವಾಬ್ದಾರಿಯುತವಾಗಿ ರ್ಪೂಣಗೊಳಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಶಿಸ್ತಿನ ಪಕ್ಷ. ನಮಗೆ ದೇಶ ಮೊದಲು, ನಂತರ ಪಕ್ಷ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ಪಕ್ಷ$ವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಹು-ಧಾ ಸೆಂಟ್ರಲ್​ ಕ್ಷೇತ್ರ ವ್ಯಾಪ್ತಿಯ 260 ಬೂತ್​ಗಳನ್ನು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.

ಹು-ಧಾ ಸೆಂಟ್ರಲ್​ ಬಿಜೆಪಿ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಅಶೋಕ ವಾಲ್ಮೀಕಿ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ಅಕ್ಕಮ್ಮ ಹೆಗಡೆ, ಮೇನಕಾ ಹುರುಳಿ, ಸುಮಾ ಶಿವನ್​ ಗೌಡರ, ಸಂಗೀತಾ ಬದ್ದಿ, ವಿಜಯಲಕ್ಷಿ$್ಮ ತಿಮ್ಮೊಲಿ, ಮೇಘನಾ ಶಿಂಧೆ, ಪ್ರವಿಣ ಪವಾರ, ಚೇತಮ ಕಲಾಲ, ದೀಪಕ ಜಿತೂರಿ, ಕಿಶನ ಬಿಲಾನಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net