

ಹುಬ್ಬಳ್ಳಿ : ಇಲ್ಲಿನ 39ನೇ ವಾರ್ಡ್ನ ಚಾಮುಂಡೇಶ್ವರಿ ನಗರದಲ್ಲಿ ಎಸ್ಎಫ್ಸಿ ಮುಕ್ತನಿಧಿ ಹಾಗೂ ಮಹಾನಗರ ಪಾಲಿಕೆ ಅನುದಾನದಡಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಶಾಸಕ ಟೆಂಗಿನಕಾಯಿ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡರೆ ಇಡೀ ಕುಟುಂಬ ಬದಲಾವಣೆ ಕಾಣಲಿದೆ ಎಂದರು.
ಹೊಲಿಗೆ ಯಂತ್ರಗಳನ್ನು ತಗೆದುಕೊಂಡು ಕೇವಲ ನಿಮ್ಮ ಕೆಲಸವನ್ನಷ್ಟೇ ಮಾಡದೇ ನಾಲ್ಕು ಜನರಿಗೆ ಉದೊ್ಯೕಗ ನೀಡುವ ಕೆಲಸವಾಗಬೇಕು. ಮಹಿಳೆಯರು ಆರ್ಥಿಕವಾಗಿ ಸಂಪೂರ್ಣ ಸಬಲೀಕರಣವಾಗಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ ಮಾತನಾಡಿ, 39ನೇ ವಾರ್ಡ್ನ 32 ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಸೆಂಟ್ರಲ್ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಹೊಲಿಗೆ ಯಂತ್ರಗಳನ್ನು ಈ ವಾರ್ಡ್ನಲ್ಲಿ ನೀಡಲಾಗಿದೆ ಎಂದು ಹೇಳಿದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿದರು. ಉಪ ಮಾಹಾಪೌರರಾದ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಬಿಜೆಪಿ ಜಿಲ್ಲಾ ವಕ್ತಾರ ರವಿ ನಾಯಕ, ವಾರ್ಡ್ ಅಧ್ಯಕ್ಷ ರಘು ಧಾರವಾಡಕರ, ಪರಶುರಾಮ ಮಲ್ಯಾಳ ಹಾಗೂ ಇತರರು ಉಪಸ್ಥಿತರಿದ್ದರು.