ಪೌರ ಕಾರ್ವಿುಕರಿಗೆ ಶಾಸಕ ಟೆಂಗಿನಕಾಯಿ ಸನ್ಮಾನ

New PK New
Published on

ಹುಬ್ಬಳ್ಳಿ : ಪೌರ ಕಾರ್ವಿುಕರ ದಿನಾಚರಣೆ ಅಂಗವಾಗಿ ಶಾಸಕ ಮಹೇಶ ಟೆಂಗಿನಕಾಯಿ ಅವರು ತಮ್ಮ ಗೃಹ ಕಚೇರಿಯಲ್ಲಿ 40 ಜನ ಪೌರ ಕಾರ್ವಿುಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಪೌರ ಕಾರ್ವಿುಕರು ಚಳಿ, ಮಳೆ ಲೆಕ್ಕಿಸದೆ ನಿತ್ಯ ನಗರವನ್ನು ಸ್ವಚ್ಛಗೊಳಿಸುತ್ತಾರೆ. ಪ್ರತಿ ಮನೆಗೆ ಹೋಗಿ, ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಸಾರ್ವಜನಿಕರು ಸಹ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು. ಮನಬಂದಂತೆ ಕಸ ಎಸೆಯಬಾರದು ಎಂದರು.

ನೇರ ನೇಮಕಾತಿಗಾಗಿ ಪೌರ ಕಾರ್ವಿುಕರು ಸಲ್ಲಿಸಿದ ಮನವಿಗೆ ಸ್ಪಂಧಿಸಿದ ಶಾಸಕ ಟೆಂಗಿನಕಾಯಿ, ಈ ಕುರಿತು ಈಗಾಗಲೇ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಎಲ್ಲ ವಾರ್ಡ್​ಗಳ ಕಾರ್ವಿುಕರಿಗೆ ಕಾರ್ಯಾಗಾರ ಏರ್ಪಡಿಸುವುದಾಗಿ ಹೇಳಿದರು.

ವಾರ್ಡ್ ಪ್ರಮುಖ ಚೇತನ ಬರದ್ವಾಡ, ಬಿಜೆಪಿ ಮುಖಂಡರಾದ ರವಿ ನಾಯಕ, ಆರೋಗ್ಯ ಅಧಿಕಾರಿ ಸುರೇಶ ರಾಠೋಡ, ಶಂಸುದ್ದಿನ್ ಬೀಳಗಿ, ಪ್ರಕಾಶ ಶೆಟ್ಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net