ಚೇತನ ಕುಟುಂಬಸ್ಥರಿಗೆ ಶಾಸಕ ಟೆಂಗಿನಕಾಯಿ ಸಾಂತ್ವನ

h17-tenginakai
Published on

ಹುಬ್ಬಳ್ಳಿ: ಇಲ್ಲಿಯ ಗುರುಸಿದ್ದೇಶ್ವರ ನಗರದಲ್ಲಿ ಇತ್ತೀಚೆಗೆ ಚಾಕು ಇರಿತದಿಂದ ಮೃತಪ್ಟ ಚೇತನ ರಕ್ಕಸಗಿ ಮನೆಗೆ ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿ ಮಹೇಶ, ಚಿಕ್ಕಮಕ್ಕಳಿಂದ ಇಂತಹ ದುರ್ಘಟನೆ ನಡೆದಿದ್ದು ನೋವಿನ ಸಂಗತಿ. ಮಕ್ಕಳಿಗೆ ತಂದೆ-ತಾಯಿ ಒಳ್ಳೆಯ ಶಿಕ್ಷಣ ನೀಡಬೇಕು. ಹೆಚ್ಚಿನ ಕಾಳಜಿ ವಹಿಸಿ, ಉತ್ತಮ ಸಂಸ್ಕಾರ ನೀಡಬೇಕು ಎಂದರಲ್ಲದೆ, ಕುಟುಂಬಸ್ಥರಿಗೆ ಆರ್ಥಿಕ ಪರಿಹಾರ ನೀಡುವ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಉಪ ಮಹಾಪೌರ ದುರ್ಗಮ್ಮ ಬಿಜವಾಡ, ಪ್ರಮುಖರಾಸ ರಾಜು ಕಾಳೆ, ಮಂಜುನಾಥ ಕಾಟ್ಕರ, ಮಲ್ಲಪ್ಪ ಶಿರಕೋಳ, ರಾಜು ಜರತಾರಘರ, ಪ್ರಕಾಶ ಬುರಬುರೆ, ಮಿಥುನ ಚವ್ಹಾಣ, ರಂಘನಾಥ ಕಠಾರೆ, ರಾಮನಗೌಡರ ಶೆಟ್ಟನಗೌಡರ್, ಪ್ರವೀಣ ಪವಾರ, ಮಹೇಶ ಶೆರಗಾರ, ಪ್ರಕಾಶ ಕಂಪ್ಲಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net