ಚಿರತೆ ಭೀತಿಗೆ ಮನೆಯಿಂದ ಹೊರಬಾರದ ಜನತೆ

web 3
Published on

ಜಯಪುರ: ಭುವನಕೋಟೆ ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕಳೆದೊಂದು ತಿಂಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ನಾಗರಿಕರಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ.

ಭುವನಕೋಟೆ, ಬೆಳವಿನಕುಡಿಗೆ, ಉತ್ತಮೇಶ್ವರ, ಹುಳಸೆಕೊಪ್ಪ, ಮಾಗಲು, ನೆಡದಹಳ್ಳಿ, ಮುತ್ತೂರು, ಬಸ್ತಿಗುಡ್ಡ, ನಾಯಿದಾಳು, ವಿಶ್ವನಾಥಪುರ, ಜಂಬೆನಾಡು ಪ್ರದೇಶಗಳಲ್ಲಿ ಆಗಾಗ್ಗೆ ರಾತ್ರಿ ವೇಳೆ ಚಿರತೆಯೊಂದು ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಗಳ ಜನರು ಭಯಭೀತರಾಗಿ ಸಂಜೆ 5ರ ನಂತರ ಮನೆಯಿಂದ ಹೊರಗಡೆ ಓಡಾಡದ ಸ್ಥಿತಿ ನಿರ್ವಣವಾಗಿದೆ.

ಭುವನಕೋಟೆ, ಚೀಪುಗೋಡು ಭಾಗಗಳಲ್ಲಿ ನಾಯಿಗಳನ್ನು, ಉತ್ತಮೇಶ್ವರ, ವಿಶ್ವನಾಥಪುರ, ಜಂಬೆನಾಡು ಭಾಗದಲ್ಲಿ ಜಾನುವಾರುಗಳನ್ನು ಹೊತ್ತೊಯ್ದಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅನೇಕ ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ

ಕಳೆದ ಕೆಲವು ತಿಂಗಳ ಹಿಂದೆ ನಿಲುವಾಗಿಲು ಸಮೀಪ ಇಬ್ಬರು ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ತೋಟದಲ್ಲಿ ಕೆಲಸ ಮಾಡಲು ಕಾರ್ವಿುಕರು ಹೆದರುವಂತಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಅಡಕೆ ಸುಲಿತಕ್ಕೂ ಜನ ಬಾರದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net