ಜಿಲ್ಲಾ ಪಂಚಾಯಿತಿಯಲ್ಲೂ ಖರೀದಿ ಚಟುವಟಿಕೆ

web 1
Published on

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಬಿಜೆಪಿ ಮುಖಂಡರು ಹಣ, ಅಧಿಕಾರದ ಆಮಿಷವೊಡ್ಡುವ ಮೂಲಕ ಜಿಪಂನಲ್ಲೂ ಸದಸ್ಯರ ಖರೀದಿ ರಾಜಕಾರಣಕ್ಕೆ ಪ್ರಯತ್ನ ನಡೆಸಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಶಾಸಕರು ಮಾತ್ರ ಅಲ್ಲ, ಗ್ರಾಪಂ. ತಾಪಂ. ಸದಸ್ಯರಿಗೆ ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಯಿತು. ಈಗ ಚಿಕ್ಕಮಗಳೂರು ಜಿಪಂನಲ್ಲಿ ಸದಸ್ಯರ ಖರೀದಿ ಪ್ರಯತ್ನ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾವು ನಿರೀಕ್ಷೆ ಮಾಡದ ಬೆಳವಣಿಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸದಸ್ಯರಿಗೆ ಅಧ್ಯಕ್ಷರನ್ನು ಮಾಡುವ ಆಮಿಷವೊಡ್ಡಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ ಸದಸ್ಯರನ್ನು ವಾಮಮಾರ್ಗದಲ್ಲಿ ಸೆಳೆದುಕೊಳ್ಳುವ ದುಸ್ಸಾಹಸ ನಡೆದಿದ್ದು, ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net