ಶೂನ್ಯ ಸರ್ಕಾರದಲ್ಲಿ ಬಿಲ್​ ಕಟ್ಟಲೂ ಹಣವಿಲ್ಲ

karkala-sunil-kumar-MLA
Published on

ಉಡುಪಿ: ಲೋಕೋಪಯೋಗಿ ಇಲಾಖೆ ಜಿಲ್ಲಾ ಮುಖ್ಯ ರಸ್ತೆ, ಶಾಲಾ ಸಂಪರ್ಕ ರಸ್ತೆ, ಗ್ರಾಮೀಣ ರಸ್ತೆಗಳಿಗೆ ಶೂನ್ಯ ಅನುದಾನ ನೀಡಿರುವುದು ಅಜೆಂಡಾದಲ್ಲೇ ಉಲ್ಲೇಖಿಸಲಾಗಿದೆ. ಇದೊಂದು ಶೂನ್ಯ ಸರ್ಕಾರ. ರಸ್ತೆ, ಸೇತುವೆ ಕಾಮಗಾರಿಗಳಿಗೆ ಮಾತ್ರವಲ್ಲದೆ ಸೌಕೂರು ಮತ್ತು ಎಣ್ಣೆಹೊಳೆ ಕಿಂಡಿ ಅಣೆಕಟ್ಟು ವಿದ್ಯುತ್​ ಚಾಲಿತ ಬಾಗಿಲಿನ ಬಿಲ್​ ಕಟ್ಟಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಉಡುಪಿ, ಉ.ಕ. ಮತ್ತು ದ.ಕ ಜಿಲ್ಲೆಯ ಶಾಸಕರು ಧ್ವನಿಎತ್ತಲಿದ್ದೇವೆ ಎಂದು ಶಾಸಕ ಸುನೀಲ್​ ಕುಮಾರ್​ ಹೇಳಿದರು.

ಜಿಲ್ಲೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಅಭಿವೃದ್ಧಿ ಬಗ್ಗೆ ದಿಕ್ಕೂಚಿ ಇಲ್ಲದೆ 11 ತಿಂಗಳ ನಂತರ ಕೆಡಿಪಿ ಸಭೆ ನಡೆದಿದೆ. ಅಭಿವೃದ್ಧಿ ಶೂನ್ಯ ಪ್ರಗತಿ ಪರಿಶೀಲನೆ. 2 ವರ್ಷದಲ್ಲಿ 1 ರೂ. ಅನುದಾನ ಬಂದಿಲ್ಲ. ಒಂದೂವರೆ ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕೆಡಿಪಿ ಸಭೆಯಲ್ಲಿ ಕಾಲು ಸಂಕ ರಚನೆಗೆ 50 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ರ್ನಿಣಯದಲ್ಲಿ ಉಲ್ಲೇಖವೇ ಇಲ್ಲ. ಸಚಿವೆ ಅಸಹಾಯಕವಾಗಿ ತಲೆ ತಗ್ಗಿಸುವ ಪರಿಸ್ಥಿತಿ ಇದೆ. ಭಾಗ್ಯಲಕ್ಷಿ$್ಮ ಯೋಜನೆ ಬಗ್ಗೆ ಕೇಳಿದರೆ ಉತ್ತರವಿಲ್ಲ. ಕಡಲ್ಕೊರೆತಕ್ಕೆ ಪರಿಹಾರವಿಲ್ಲ ಎಂದರು.

6011 ಅರ್ಜಿ ತಿರಸತ

ಬಗರ್​ಹುಕುಂನಲ್ಲಿ 6011 ಅರ್ಜಿ ತಿರಸತವಾಗಿದೆ. 16471 ಅರ್ಜಿಗಳನ್ನು ತಿರಸ್ಕರಿಸಲು ತಹಶೀಲ್ದಾರ್​ ಜಿಲ್ಲಾಧಿಕಾರಿಗಳಿಗೆ ಶಿಾರಸ್ಸು ಮಾಡಿದ್ದಾರೆ. ಅಕ್ರಮ ಸಕ್ರಮ ಸಮಿತಿಯಲ್ಲಿ ಈ ಬಗ್ಗೆ ತೀರ್ಮಾನವಾಗಬೇಕು. ಶಾಸಕರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಸಭೆಯಲ್ಲಿ ಈ ಪ್ರಕ್ರಿಯೆ ಸ್ಥಗಿತಕ್ಕೆ ಸಚಿವೆ ನಿರ್ದೇಶನ ನೀಡಿದರೂ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧ್ಯೆ ತಾಳಮೇಳವಿಲ್ಲ. ದಿಕ್ಕು ದೆಸೆ ಇಲ್ಲದ ಜಿಲ್ಲೆಯ ಆಡಳಿತದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೇಳು ಪ್ರಯತ್ನ ಮಾಡಿದ್ದೇವೆ ಎಂದರು.

ಸಾಧುಸಂತರಿಗೆ ರಕ್ಷಣೆಯಿಲ್ಲ

ಕಾಂಗ್ರೆಸ್​ ಸರ್ಕಾರದಲ್ಲಿ ಸಾಧು ಸಂತರು ಹಿಂದುಗಳಿಗೆ ರಕ್ಷಣೆ ಇಲ್ಲ. ಸರ್ಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ಕೇಸ್​ ಆಗುತ್ತದೆ. ಚಂದ್ರಶೇಖರ ಸ್ವಾಮೀಜಿ ಭಾಷಣದಲ್ಲಿ ಹೇಳಿದ್ದ ತುಣುಕು ಇಟ್ಟುಕೊಂಡು ಕೇಸ್​ ಹಾಕಲಾಗಿದೆ. ನಕ್ಸಲ್​ ಪರವಾಗಿ ಮಾತನಾಡುವವರ ಬಗ್ಗೆ ಸರ್ಕಾರ ಮೃದು ಧೋರಣೆ ತಾಳುತ್ತದೆ. ಹಿಂದು ಕಾರ್ಯಕರ್ತರು ಹೇಳಿಕೆ ಕೊಟ್ಟರೆ ಅವರ ಮೇಲೆ ಸುಮೋಟೋ ಕೇಸ್​ ಮಾಡುತ್ತಾರೆ. ಸರ್ಕಾರ ತನ್ನ ನಿಲುವಿನಿಂದ ಹೊರಬಂದು ಸಾಧು ಸಂತರಿಗೆ ಗೌರವ ಕೊಡಬೇಕು ಎಂದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ

ಬಾಂಗ್ಲಾ ದೇಶದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಾಂಗ್ಲಾದ ಹಿಂದುಗಳಿಗೆ ನೈತಿಕ ಸ್ಥೈರ್ಯ ತುಂಬಲು ರಾಜ್ಯದಲ್ಲಿ ಡಿ. 4 ಮತ್ತು 5 ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಡಿ. 4 ರಂದು ಉಡುಪಿ ಜಿಲ್ಲೆಯಲ್ಲಿ ಬೃಹತ್​ ಪ್ರತಿಭಟನೆ ನಡೆಯಲಿದೆ. ಸಾವಿರಾರು ಹಿಂದುಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಮಾಜಿ ಸಚಿವ ಸುನಿಲ್​ ಕುಮಾರ್​ ಹೇಳಿದರು. ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್​ ಸುವರ್ಣ, ಕಿರಣ್​ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net