

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ತೋಡಿದ ಹಳ್ಳಕ್ಕೆ ಆರೋಪಿ ನವೀನ್ ಬಿದ್ದನಾ ಎಂಬ ಅನುಮಾನ ಮೂಡತೊಡಗಿದೆ.
ಅಲ್ಪ ಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಎರಡು ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ಇದು ಎಸ್ಡಿಪಿಐ ಮುಖಂಡರಲ್ಲಿ ಅಸಹನೆ ಮೂಡಿಸಿತ್ತು ಎನ್ನಲಾಗಿದೆ. ಹೀಗಾಗಿ ಶಾಸಕರ ರಾಜಕೀಯ ಏಳಿಗೆಗೆ ತಡೆಯೊಡ್ಡಲು ಎಸ್ಡಿಪಿಐ ಯೋಜನೆ ರೂಪಿಸುತ್ತಿತ್ತು ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಎಸ್ಡಿಪಿಐ ಯೋಜನೆಗೆ ದಾಳವಾಗಿ ಸಿಕ್ಕಿದೆ ನವೀನ್ ಎಂದು ಹೇಳಲಾಗಿದೆ. ಅದಕ್ಕೆ ಕಾರಣ ನವೀನ್ ಫೇಸ್ಬುಕ್ ಖಾತೆಯ ಫ್ರೆಂಡ್ ಲಿಸ್ಟ್ನಲ್ಲಿ ಫೈರೋಜ್ ಪಾಷ ಹೆಸರಿದೆ. ನವೀನ್ ಈ ಹಿಂದೆ ಪಾದರಾಯನಪುರ ಗಲಭೆ ಹಾಗೂ ತಬ್ಲಿಘಿಗಳ ಪ್ರಕರಣಗಳನ್ನು ಟೀಕಿಸಿ ತನ್ನ ಎಫ್ಬಿಯಲ್ಲಿ ಪೊಸ್ಟ್ ಮಾಡಿಕೊಂಡಿದ್ದ. ಇದನ್ನು ಗಮನಿಸಿದ್ದ ಫೈರೋಜ್ ಪಾಷ ನವೀನ್ನನ್ನು ಪ್ರಚೋದಿಸುತ್ತಾ ಬಂದಿದ್ದನಂತೆ.
ಹೀಗೆ ನಿರಂತರವಾಗಿ ಪ್ರಚೋದಿಸುತ್ತಾ ಕೊನೆಗೆ ನವೀನ್ಗೆ ಫೇಸ್ಬುಕ್ನಲ್ಲೇ ಖೆಡ್ಡಾ ತೋಡಿ ಫೈರೋಜ್ ಪಾಷ ಗಲಭೆಗೆ ಕಾರಣವಾಗಿದ್ದಾನೆನ್ನಲಾಗಿದೆ. (ದಿಗ್ವಿಜಯ ನ್ಯೂಸ್)