

ಮಂಡ್ಯ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರ ಪಶು ಚಿಕಿತ್ಸಾ ವಾಹನವನ್ನು ಲೋಕಾರ್ಪಣೆ ಮಾಡಲಾಗಿದೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಶ್ರೀನಿವಾಸ್ ಸಲಹೆ ನೀಡಿದರು.
ನಗರದ ಪಾಲಿ ಕ್ಲಿನಿಕ್ ಮತ್ತು ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸೋಮವಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಚಾರ ಪಶು ಚಿಕಿತ್ಸಾ ವಾಹನಗಳನ್ನು ಬಳಸಿಕೊಳ್ಳುವುದು ಮುಖ್ಯವಾಗಬೇಕು. ಇದು ಗ್ರಾಮೀಣ ಭಾಗದಲ್ಲಿ ಇದರ ಪ್ರಯೋಜನ ಹೆಚ್ಚಿದೆ. ಇಲಾಖೆ ಮಟ್ಟದಲ್ಲಿಯೂ ಅವರಿಗೆ ನೆರವಾಗಬೇಕು. ಸಂಚಾರ ವಾಹನಗಳ ಸದ್ಭಳಕೆ ಆಗಬೇಕು ಎಂದರು.
ಮುಖ್ಯಪಶು ಆಡಳಿತಾಧಿಕಾರಿ ಡಾ.ರಮೇಶ್‌ರಾಜು ಮಾತನಾಡಿ, ಜಾನುವಾರುಗಳ ನೆರವಿಗೆ ತುರ್ತಾಗಿ ಧಾವಿಸುವ ದೃಷ್ಟಿಯಿಂದ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅನುಕೂಲವಾಗಲೆಂದು ಈ ವಾಹನಗಳ ಬಿಡಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯ ನಾಗೇಶ್, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ನಟರಾಜು, ಪಶುವೈದ್ಯಾಧಿಕಾರಿಗಳಾದ ಡಾ.ನಂಜುಂಡಸ್ವಾಮಿ, ಡಾ.ಸತೀಶ್, ಡಾ.ಚೇತನ್, ಡಾ.ಸೈಯದ್ ರೆಹಮಾನ್ ಇತರರಿದ್ದರು.