

ಹುಮನಾಬಾದ್: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ಅಪಾರ ಸಂಖೆಯ ಭಕ್ತರು ದರ್ಶನಕ್ಕೆ ಬರುವುದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ದೇವಾಲಯದ ಆಡಳಿತ ಅಧಿಕಾರಿಗಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚಿಸಿದ್ದಾರೆ.
ಪಟ್ಟಣದ ಆರಾಧ್ಯ ದೇವರಾದ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ, ದೇವಸ್ಥಾನದಲ್ಲಿನ ಸ್ವಚ್ಚತೆ ಹಾಗೂ ವ್ಯವಸ್ಥೆ ಪರಿಶೀಲಿಸಿ, ಶ್ರಾವಣ ಮಾಸದಲ್ಲಿ ಶ್ರೀ ವೀರಭದ್ರೇಶ್ವರ ದರ್ಶನ ಪಡೆಯಲು ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸುವ ಭಕ್ತರು ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭಕ್ತರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ದೇವಾಲಯದ ಆಡಳಿತ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು. ದೇವಸ್ಥಾನದ ಅಧೀನದ ತೇರ ಮೈದಾನದಲ್ಲಿರುವ ಅಂಗಡಿ ವ್ಯಾಪಾರಸ್ಥರನ್ನು ಭೇಟಿಯಾಗಿ ಕುಂದುಕೊರತೆ ಆಲಿಸಿ, ದೇವಸ್ಥಾನದ ವ್ಯಕ್ತಿಗಳಿಂದ ಮತ್ತು ಅಧಿಕಾರಿಗಳಿಂದ ಸಮಸ್ಯೆ ಉಂಟಾಗುತ್ತಿದ್ದರೆ ನನ್ನ ಗಮನಕ್ಕೆ ತಂದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಗಿರೀಶ ಪಾಟೀಲ್, ಗಿರೀಶ ತುಂಬಾ, ಶ್ರೀನಾಥ ದೇವಣಿ, ನಾಗಭೂಷಣ ಸಂಗಮ, ಸುನೀಲ ಪತ್ರಿ, ಗೋಪಾಲಕೃಷ್ಣ ಮೊಹಾಳೆ ಇತರರಿದ್ದರು.