ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

IMG_20220926_110342-2
Published on

ಚಿತ್ರದುರ್ಗ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಚಿತ್ರದುರ್ಗ ತಾಲೂಕು ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾ ಖೆ ಸೋಮವಾರ ಆಯೋಜಿಸಿದ್ದ ಹಿರೇಗುಂಟನೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ‌್ಯಕ್ರಮ ಮತ್ತು ನೂತನ ಶಾಲಾ ಕೊಠಡಿ ಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮಕ್ಕಳಲ್ಲಿ ಒಂದಲ್ಲ,ಒಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿ ಇರುವ ಈ ಪ್ರತಿಭೆಗಳ ಪ್ರದರ್ಶನಕ್ಕೆ ಸರ್ಕಾರ ಹೋಬಳಿ,ತಾ ಲೂಕು,ಜಿಲ್ಲಾ,ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಧೆಗಳನ್ನು ಏರ್ಪಡಿಸುತ್ತದೆ. ಬರವಣಿಗೆ,ಆಶು ಭಾಷಣ,ಧಾರ್ಮಿಕ ಪಠಣ, ಕೋಲಾಟ,ಲಘು ಸಂಗೀತ,ಚಿತ್ರ ಕಲೆ,ಕಂಠಪಾಠ,ಹೆಸರಾಂತ ನಾಯಕರ ವೇಷ ಭೂಷಣ ಇತ್ಯಾದಿ ಸ್ಪರ್ಧೆಗಳ ಮೂಲಕ ಮಕ್ಕಳು ತಮ್ಮಲ್ಲಿ ರುವ ಕಲೆಗಳನ್ನು ಅತ್ಯುತ್ತಮವಾಗಿ ಅನಾವರಣಗೊಳಿಸುತ್ತಿದ್ದಾರೆ.

ಗ್ರಾಮೀಣ ಸೊಗಡ ಉಳಿಸಿ,ಬೆಳೆಸುವ ಕೆಲಸ ಅವರಿಂದಾಗುತ್ತಿದೆ. ಶಿಕ್ಷಕರು ಮಕ್ಕಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ರೂಢಿಸಬೇಕು. ಇದರಿಂದ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದರು.

ಶಾಲಾ ಕೊಠಡಿಗಳಿಗೆ ಚಾಲನೆ

ಡಿಎಂಎಫ್ ಅನುದಾನದಲ್ಲಿ ನನ್ನ ಕ್ಷೇತ್ರದ ಶಾಲೆಗಳ ನೂತನ ಕೊಠಡಿಗಳ ನಿರ್ಮಾಣಕ್ಕೆ 18 ಕೋಟಿ ರೂ.ಅನುದಾನ ನೀಡಿದ್ದೇನೆ. ಕಡ್ಲೆ ಗುದ್ದು ಗ್ರಾಮ ಪ್ರಾಥಮಿಕ ಶಾಲೆಯಲ್ಲಿ 32 ಲಕ್ಷ ರೂ.ವೆಚ್ಚದಲ್ಲಿ 3 ಕೊಠಡಿಗಳನ್ನು ನಿರ್ಮಿಸಲಾಗಿದೆ. ಶೀಘ್ರ ಇನ್ನೊಂದು ಕೊಠಡಿಗೂ ಅ ನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.

ಗ್ರಾಪಂ ಅಧ್ಯಕ್ಷೆ ಹೊನ್ನಮ್ಮ,ಉಪಾಧ್ಯಕ್ಷ ಮಂಜಣ್ಣ,ಸದಸ್ಯರಾದ ಕುಮಾರ್,ತಿಪ್ಪೇಸ್ವಾಮಿ,ಬಿಇಒ ವಿ.ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಜಯಣ್ಣ,ಎಂ.ಆರ್.ನಾಗರಾಜ್,ರಾಜ್ಯಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ತಿಮ್ಮಾರೆಡ್ಡಿ,ಆಂಜನೇಯ ಶಾಲೆ ಮುಖ್ಯಶಿಕ್ಷಕ ಮಹೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net