MLA ಸೈಲ್ ಜೈಲಿಗೆ ಕಾರವಾರದಲ್ಲಿ2 ದಿನಗಳಲ್ಲಿ ರಾಜಕೀಯ ಮುನ್ನೆಲೆಗೆ

prayer-for-MLA
Published on

ಕಾರವಾರ:ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ದೋಷಿಯಾಗಿ ಕಾರವಾರ-ಅಂಕೋಲಾ MLA ಸತೀಶ ಸೈಲ್ ಜೈಲು ಸೇರಿರುವುದು ಕಾರವಾರ ರಾಜಕೀಯದಲ್ಲಿ ಸಂಚನಲ ಮೂಡಿಸಿದೆ. ಅವರು ಶಾಸಕತ್ವದಿಂದ ಅನರ್ಹಗೊಳ್ಳುವ ಭೀತಿ ಇದೆ. ಇದರಿಂದ ಕ್ಷೇತ್ರದಲ್ಲಿ ಈಗ ಉಪ ಚುನಾವಣೆಯ ಚರ್ಚೆಗಳು ಶುರುವಾಗಿಬಿಟ್ಟಿವೆ. ಉಪ ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು..?, ಆನಂದ ಅಸ್ನೋಟಿಕರ್ ಕಾಂಗ್ರೆಸ್‌ಗೆ ಹೋಗಲಿದ್ದಾರೆಯೇ..?, ರೂಪಾಲಿ ನಾಯ್ಕ-ಆನಂದ ಅಸ್ನೋಟಿಕರ್ ಪೈಟ್ ನಡೆಯಲಿದೆಯೇ ಎಂಬೆಲ್ಲ ಚರ್ಚೆಗಳನ್ನು ಮತದಾರರು ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸಂಬAಧ ಭಿನ್ನ ಚರ್ಚೆಗಳು ಶುರುವಾಗಿವೆ. ಪ್ರಮುಖ ಮುಖಂಡರಿಗೂ ಜನ ಕರೆ ಮಾಡಿ ಮಾತನಾಡಲು ಶುರು ಮಾಡಿದ್ದಾರೆ ಎನ್ನಲಾಗಿದೆ.

MLA  ವಿಚಾರ ಆನಂದ ಸ್ಪಷ್ಟನೆ:

ಈ ಕುರಿತು ವಿಡಿಯೋವೊಂದನ್ನು ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ಆನಂದ ಅಸ್ನೋಟಿಕರ್, ಈ ವಿಚಾರವನ್ನೂ ಚರ್ಚೆ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸತೀಶ ಸೈಲ್ ಅವರಿಗೆ ಇನ್ನೂ ಕಾನೂನು ಹೋರಾಟದ ಅವಕಾಶಗಳಿವೆ. ಅವರ ಕುಟುಂಬ ಈ ಸಂಕಷ್ಟದಿAದ ಹೊರ ಬರಲಿ ಎಂದು ನಾವು ಆಶಿಸೋಣ. ಅವರು ಶಾಸಕತ್ವದಿಂದ ಅನರ್ಹವಾದರೆ ಮುಂದೆ ಉಪ ಚುನಾವಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಇದ್ದೇ ಇದೆ. ದಯಮಾಡಿ ಈಗಲೇ ಅಂಥ ವಿಷಯಗಳನ್ನು ಚರ್ಚಿಸಲು ಯಾರೂ ನನಗೆ ಕರೆ ಮಾಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ ಎಂದಿದ್ದಾರೆ.

ಹುದ್ದೆಯಿಂದ ಅನರ್ಹಗೊಳಿಸಿ: ಬಿಜೆಪಿ

ಶಿಕ್ಷೆಗೊಳಗಾಗಿರುವ ಶಾಸಕ ಸತೀಶ ಸೈಲ್ ಅವರನ್ನು ವಿಧಾನಸಭಾಧ್ಯಕ್ಷರು ತಕ್ಷಣ ವಜಾಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಒತ್ತಾಯಿಸಿದ್ದಾರೆ.ಪತ್ರಿಕಾ ಹೇಳಿಕೆ ನಿಡಿರುವ ಅವರು, ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಜೈಲು ಶಿಕ್ಷೆಗೆ ಒಳಗಾಗುವ ಶಾಸಕರ ಸ್ಥಾನ ರದ್ದು ಆಗಬೇಗಾಗಿರುವುದು ನಿಯಮ. ಸೈಲ್ ಅವರನ್ನು ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಬೇಲೆಕೇರಿ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.  ನಷ್ಟವಾಗಿದೆ. ಇಂತಹ ಗುರುತರ ಪ್ರಮಾದ ಎಸಗಿರುವ ವ್ಯಕ್ತಿ ಶಾಸಕ ಸ್ಥಾನದಲ್ಲಿ ಮುಂದುವರಿಯಬಾರದು. ಕಾಂಗ್ರೆಸ್ ಎಂದಿನಂತೆ ತನ್ನ ಭ್ರಷ್ಟ ಶಾಸಕರ ಬೆಂಗಾವಲಾಗಿ ನಿಲ್ಲುವ ಧೋರಣೆ ಅನುಸರಿಸುತ್ತಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂಬುದನ್ನೇ ನೆಪ ಮಾಡಿಕೊಂಡು ಅಪರಾಧಿ ಶಾಸಕರು ಜವಾಬ್ದಾರಿಯಲ್ಲಿ ಮುಂದುವರಿಯುವುದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವುದು ಕ್ಷೇತ್ರದ ಜನತೆಗೆ ಮಾಡುವ ದ್ರೋಹವಾಗುತ್ತದೆ ಎಂದಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನವಾದ ಶಾಸಕರಾಗಿದ್ದುಕೊಂಡು, ಸರ್ಕಾರಕ್ಕೆ ವಂಚಿಸುವಂತವರಿಗೆ ಈ ತೀರ್ಪು ತಕ್ಕ ಪಾಠವಾಗಬೇಕು. ನ್ಯಾಯಾಲಯದ ಮುಂದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಈ ತೀರ್ಪು ಸಾರಿದೆ. ಇಂತಹ ತೀರ್ಪಿನಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮತ್ತು ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

ಪೂಜೆ: ಸತೀಶ ಸೈಲ್‌ ಗೆ ಜಾಮೀನು ಸಿಗಲಿ ಎಂದು ಪ್ರಾರ್ತಿಸಿ ಕಾಂಗ್ರೆಸ್‌ ಕಾರ್ಯಕರ್ತರು ಕಾರವಾರ ಮಾರುಕಟ್ಟೆ ಗಣಪತಿ ದೇವಸ್ತಾನದಲ್ಲಿ ಸೋಮವಾರ ಪೂಜೆ ಸಲ್ಲಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಮೀರ ನಾಯ್ಕ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net