

ಪುತ್ತೂರು: ತಾಲೂಕಿನ ವಿವಿಧ ಭಾಗಗಳಲ್ಲಿ ಗುಡ್ಡ ಕುಸಿತವಾಗಲು ಗುಡ್ಡವನ್ನು ಅವೈಜಾನಿಕವಾಗಿ ಕತ್ತರಿಸಿ ಮನೆ ನಿರ್ಮಾಣ ಮಾಡಿದ್ದೇ ಮುಖ್ಯ ಕಾರಣವಾಗಿದೆ. ಖಾಸಗಿ ಜಾಗದಲ್ಲಿ ಆಗಿರುವ ಕುಸಿತಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಲಭಿಸುವುದಿಲ್ಲ. ಪುತ್ತೂರು ತಾಲೂಕಿನಲ್ಲಿ ಸುಮಾರು ೮ ಕೋಟಿ ನಷ್ಟ ಸಂಭವಿಸಿದ್ದು, ಮನುಷ್ಯರ ಪ್ರಾಣಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಪ್ರಾಕೃತಿಕ ವಿಕೋಪ ನಿಽಯಲ್ಲಿ ೫೦ ಲಕ್ಷ ಇದ್ದು, ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶಾಸಕ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಽಸಿ ತಾಲೂಕು ಮಟ್ಟದ ಅಽಕಾರಿಗಳ ಸಭೆಯಲ್ಲಿ ಮಾತನಾಡಿ, ೫ ಮನೆ ಪೂರ್ಣ ಹಾನಿ, ೬ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಹಾನಿ ಮನೆಗೆ ೧.೨೦ ಲಕ್ಷ ರೂ., ಭಾಗಶಃ ಹಾನಿಗೆ ನೀಡಲಾಗುವ ಪರಿಹಾರ ಧನವನ್ನು ತಲಾ ೫೦ ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ೨೪ ಗಂಟೆ ಕಾಲ ಕೃತಕ ನೆರೆಯಿಂದ ಮನೆಯಲ್ಲಿ ನೀರು ತುಂಬಿದ್ದರೆ ಅಂತಹವರಿಗೆ ೧೦ ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ೬ ಹಸು, ೩ ಕರು ಮೃತಪಟ್ಟಿದ್ದು, ಪ್ರತಿ ಹಸುವಿಗೆ ೩೭.೫ ಸಾವಿರ ರೂ., ಕರುವಿಗೆ ೨೦ ಸಾವಿರ ರೂ. ಪರಿಹಾರ ವಿತರಿಸಲಾಗುವುದು. ಸಂತ್ರಸ್ತ ಕುಟುಂಬಗಳಿಗೆ ಕೊಂಬೆಟ್ಟು ಹಾಸ್ಟೆಲ್, ಉಪ್ಪಿನಂಗಡಿ ಜೂನಿಯರ್ ಕಾಲೇಜು, ಪುಳಿತ್ತಡಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ನಗರದ ಸಮುದಾಯ ಭವನವನ್ನೂ ಹೆಚ್ಚುವರಿಯಾಗಿ ಕಾದಿರಿಸಲಾಗಿದೆ ಎಂದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ೨ ಕೋಟಿ ನಷ್ಟ ಅಂದಾಜಿಸಲಾಗಿದ್ದು, ೭೬೦ ವಿದ್ಯುತ್ ಕಂಬಗಳಿಗೆ ಹಾಗೂ ೧೦ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ೩೮ ಕಿ.ಮೀ.ನಷ್ಟು ವಿದ್ಯುತ್ ಲೈನ್‌ಗಳಿಗೆ ಹಾನಿಯಾಗಿದೆ. ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿ ೩.೭ ಕೋ.ರೂ.ನಷ್ಟು, ಶಾಲೆಗಳಲ್ಲಿ ೫ ಲಕ್ಷ ರೂ., ನಗರ ಸಭಾ ವ್ಯಾಪ್ತಿಯಲ್ಲಿ ೬ ಕಿ.ಮೀ.ರಸ್ತೆಗೆ ಹಾನಿ ಉಂಟಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸಂಬಂಽಸಿ ೨ ಕೋ.ರೂ. ಎಂದು ಅಽಕಾರಿಗಳು ತಿಳಿಸಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಕಾರ್ಯ ನಿರ್ವಹಣಾಽಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್., ತಾಲೂಕು ಆರೋಗ್ಯಽಕಾರಿ ಡಾ.ದೀಪಕ್ ರೈ, ನಗರಸಭೆ ಪೌರಯುಕ್ತ ಮಧು ಎಸ್ ಮನೋಹರ್, ವಲಯ ಅರಣ್ಯಾಽಕಾರಿ ಕಿರಣ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತ ರಾಜರಾಮ್, ಮೆಸ್ಕಾಂ ಇಇ ರಾಮಚಂದ್ರ ಉಪಸ್ಥಿತರಿದ್ದರು.