ಪಾಲಾರ್ ನದಿಗೆ ಭಾಗಿನ ಅರ್ಪಿಸಿದ ಶಾಸಕಿ ರೂಪಕಲಾ

FotoJet 3333
Published on

ಬೇತಮಂಗಲ: ಪಾಲಾರ್ ಜಲಾಶಯ ತುಂಬಿ ಹರಿದ ಹಿನ್ನೆಲೆಯಲ್ಲಿ ಶನಿವಾರ ಕೆಜಿಎಫ್ ಶಾಸಕಿ ರೂಪಕಲಾ ಬಾಗಿನ ಅರ್ಪಿಸಿದರು.

ಕಳೆದ 4 ವಷರ್ದ ಹಿಂದೆ ಪಾಲಾರ್ ಕೆರೆಯಲ್ಲಿ ತುಂಬಿಕೊಂಡಿದ್ದ ವಿಷ ಪೂರಿತ ಗಿಡ-ಮರಗಳು ಸೇರಿ ಕೆರೆಯನ್ನು ಶಾಸಕಿ ರೂಪಕಲಾ ಸ್ವಚ್ಛಗೊಳಿಸುತ್ತಿದ್ದಂತೆ ಕೆರೆಗೆ ನೀರು ಬಂದು ಕೋಡಿ ಹರಿದಿತ್ತು. ಇದೀಗ ಅಗತ್ಯವಾಗಿ ಬೇಕಾಗಿದ್ದ ಎರಡು ಸೇತುವೆಗಳು ರಸ್ತೆ ಸೇರಿ ಒಟ್ಟು 10 ಕೋಟಿ ರೂಗಳನ್ನು ಕಾಮಗಾರಿಲೋಕಾರ್ಪಣೆ ವಾಡಿದ್ದು, ಆ ಕಾರ್ಯಕ್ರಮದ ಸಂತಸದ ಹಿಂದೆಯೇ ಬೇತಮಂಗಲ ಪಾಲಾರ್ ಜಲಾಶಯ ಕೋಡಿ ಹರಿದಿದೆ.

ಶನಿವಾರ ವಿಜಯೇಂದ್ರ ಸ್ವಾಮಿ ದೇವಾಲಯದಲ್ಲಿ ಶಾಸಕಿ ಪೂಜೆ ಸಲ್ಲಿಸಿ ನಂತರ ಸಂಗಮೇಶ್ವರ ದೇವಾಲಯ ಬಳಿ ನದಿ ದಡದಲ್ಲಿ ಬಾಗಿನ ಅರ್ಪಿಸಿದರು.

ಶಾಸಕಿ ರೂಪಕಲಾ ವಾತನಾಡಿ, ಶ್ರದ್ಧೆ, ಭಕ್ತಿ ಮತ್ತು ಸೇವಾ ಮನೋಭಾವದಿಂದ ಯಾವುದೇ ಕೆಲಸ ವಾಡಿದರೂ ದೇವರು ನಮಗೆ ಶಕ್ತಿ ತುಂಬುವ ಕೆಲಸ ವಾಡುತ್ತಾನೆ. ಆ ನಂಬಿಕೆ ಇರುವುದರಿಂದಲೇ ಯಾವುದೇ ಕೆಲಸ ವಾಡಿದರೂ ಸೇವಾ ಮನೋಭಾವದಿಂದ ವಾಡುತ್ತೇನೆ. ಆದ್ದರಿಂದ ಕ್ಷೇತ್ರದ ಜನಕ್ಕೆ ದೇವರು ಎರಡು ರೀತಿಯ ವರ ನೀಡಿದ್ದಾನೆ ಎಂದು ಹೇಳಿದರು.

ಹುಲ್ಲೂರು ಅಧ್ಯಕ್ಷ ಸೊನ್ನಮ್ಮ ರಮೇಶ್, ವಾಜಿ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್, ಗೊಲ್ಲಹಳ್ಳಿ ಪಾಪಣ್ಣ, ಕಾರೀ ಪ್ರಸನ್ನ, ಇನಾಯತುಲ್ಲ ಷರೀಫ್, ಸದಸ್ಯರಾದ ಸುರೇಂದ್ರ ಗೌಡ, ಶಂಕರ್ ಸುಕನ್ಯ, ಶಿಲ್ಪಾ, ಸೋಮಣ್ಣ, ಮುಖಂಡರಾದ ಎನ್.ಡಿ.ಶಿವ ಪ್ರಸಾದ್, ಬ್ಯಾಟಗೌಡ, ರಾಜಣ್ಣ, ಅಮು ವಿಜಯೇಂದ್ರ, ಒಬಿಸಿ ಮುನಿಸ್ವಾಮಿ, ಆಕಿಲ್ ಪಾಷಾ ಇದ್ದರು.

ಅರ್ಹತೆ ಆಧಾರದಲ್ಲಿ ಸಚಿವ ಸ್ಥಾನ ಸಿಗಲಿ: ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೂಪಕಲಾ, ನನಗೆ ಅರ್ಹತೆ ಇದ್ದರೆ ಪಕ್ಷ ಮತ್ತು ಸರ್ಕಾರ ನನಗೆ ಮಂತ್ರಿ ಸ್ಥಾನ ನೀಡಲಿ, ನನ್ನ ತಂದೆ ಅವರು ತ್ಯಾಗ ವಾಡಿದ ಸ್ಥಾನಕ್ಕೆ ನನನ್ನು ಮಂತ್ರಿ ವಾಡಿದರೆ ಅದು (ಸಚಿವ) ನನಗೆ ಬೇಡ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net