ರೇವಡಿಹಾಳ ಗ್ರಾಮಕ್ಕೆ ಸೌಲಭ್ಯ, ಶಾಸಕ ಪಾಟೀಲ್ ಭರವಸೆ

IMG-20230810-WA0012.jpg
Published on

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಗ್ರಾಮಕ್ಕೆ ಭೇಟಿ ನೀಡಿದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ದೇವಸ್ಥಾನಗಳು, ರಸ್ತೆ ಸೇರಿ ಹಲವು ಸುಧಾರಣೆಗಳು ಆಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಸಮಸ್ಯೆ ಆಲಿಸಿದ ಶಾಸಕರು, ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ಶಾಸಕ ಪಾಟೀಲ ಅವರನ್ನು ಸನ್ಮಾನಿಸಿದರು.

ಮುಖಂಡರಾದ ಮಂಜುನಾಥ ಆಲೂರ, ನಾಗಯ್ಯ ಹಿರೇಮಠ, ಗದಗಯ ಹಿರೇಮಠ, ಗುರುಸಿದ್ದಪ್ಪ ಗಾಣಿಗೇರ, ಪುಂಡಲೀಕ ಶಿಂಧೆ, ರಾಘವೇಂದ್ರ, ಮಂಜು ಬಡಿಗೇರ, ಗುರು ಹಿರಿಯರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net