ಕರ್ನಾಟಕದಲ್ಲಿ ರಾಮರಾಜ್ಯದಂತೆ ಅಧಿಕಾರ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

1 (7)
Published on

ಮಂಡ್ಯ: ಕರ್ನಾಟಕದಲ್ಲಿ ರಾಮರಾಜ್ಯದಂತೆ ಅಧಿಕಾರ ನಡೆಯುತ್ತಿದೆ. ಗ್ಯಾರಂಟಿ ಯೋಜನೆಯನ್ನ 2 ತಿಂಗಳಲ್ಲೆ ಈಡೇರಿಸಿದ್ದೇವೆ. ಆದ್ದರಿಂದ ನುಡಿದಂತೆ ನಡೆದ ಸರ್ಕಾರವೆಂದು ಅಭಿನಂದನೆ ಸಲ್ಲಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಅನುದಾನದ ಕೇಳದಂತೆ ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆನ್ನುವುದು ಸುಳ್ಳು. ನಿಮಗೆ ಏನು ಬೇಕು ಹೇಳಿ ಮಾಡಿಕೊಡೋಣವೆಂದಿದ್ದಾರೆ ಎಂದರು.

ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಗೆ ಅನ್ಯಾಯ ವಿಚಾರವಾಗಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕೊಟ್ಟಿದೆ. ಜಿಲ್ಲೆಯಲ್ಲಿ 60,000 ಕುಟುಂಬವಿದೆ. ಮನೆಯೊಡತಿಗೆ 2000 ರೂ, ಅಕ್ಕಿಗೆ ಎಷ್ಟು ಹಣ ಆಗುತ್ತದೆ ಅದು ಕೂಡ ಬಜೆಟ್ ಅಲ್ವ?. ಇದು ಪರಿಷ್ಕೃತ ಬಜೆಟ್, ಮೇನ್ ಬಜೆಟ್ ಅಲ್ಲ. ಕಳೆದ ಸರ್ಕಾರ ಇಟ್ಟಿದ್ದ ಬಜೆಟ್‌ಗೆ 15 ಸಾವಿರ ಕೋಟಿ ರೂ ಬಜೆಟ್ ಹೆಚ್ಚು ಇಟ್ಟಿದ್ದೇವೆ. ಹೆಚ್ಚುವರಿಯಾಗಿ ಬಜೆಟ್ ನಲ್ಲಿ 200 ಕೋಟಿ ರೂ ಕೇಳಬೇಕು ಎಂದುಕೊಂಡಿದ್ದೇವೆ. ನಗರಾಭಿವೃದ್ದಿ ಇಲಾಖೆಯಿಂದ 50 ಕೋಟಿ ರೂಗಳನ್ನು ಒಳಚರಂಡಿ ಅಭಿವೃದ್ದಿಗೆ ನೀಡಿದ್ದಾರೆ. ಹಂತ ಹಂತವಾಗಿ ಮಂಡ್ಯ ಅಭಿವೃದ್ದಿ ಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೃಂಗೇರಿಯಲ್ಲಿ ವೃಷಭ ಶೃಂಗೇಶ್ವರನಿಗೆ ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ಪ್ರತೀತಿ. ಅದರಂತೆ ಪೂಜೆ ಸಲ್ಲಿಸಿ ಹೊರಬರ್ತಿದ್ದಂತೆ ಮಳೆ ಬಂತು. ಮಳೆ ಬೆಳೆಯಾಗಿ ಕೆಆರ್‌ಎಸ್ ಅಣೆಕಟ್ಟೆ ತುಂಬಿದರೆ ನಮಗೆ ಅನುಕೂಲ. ಅದಕ್ಕಾಗಿ ದೇವರ ಬಳಿ ಕೇಳಿಕೊಂಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net