ರವಿಕುಮಾರ್‌ಗೆ ನಿತ್ಯಶಾಸಕ ಬಿರುದು ಪ್ರದಾನ: ದ್ಯಾಪಸಂದ್ರ ಗ್ರಾಮಸ್ಥರಿಂದ ಅಭಿನಂದನೆ

MLA Ravikumar was awarded the title Mandya
Published on

ಮಂಡ್ಯ: ಶಾಸಕ ರವಿಕುಮಾರ್ ಗಣಿಗ ಅವರಿಗೆ ತಾಲೂಕಿನ ದ್ಯಾಪಸಂದ್ರ ಗ್ರಾಮಸ್ಥರು ‘ನಿತ್ಯಶಾಸಕ’ ಎನ್ನುವ ಬಿರುದು ನೀಡಿ ಅಭಿನಂದಿಸಿದರು.

ದ್ಯಾಪಸಂದ್ರ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ ವೇಳೆ ಮುಖಂಡರು ಬಿರುದು ನೀಡಿ ಗೌರವಿಸಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ದ್ಯಾಪಸಂದ್ರ ಉಮೇಶ್ ಮಾತನಾಡಿ, ಶಾಸಕ ರವಿಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಅಭಿವೃದ್ಧಿ ಕಾರ‌್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಸದಾ ಚಟುವಟಿಕೆಯಿಂದ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಬಳಿಕ ಮಾತನಾಡಿದ ಶಾಸಕರು, ದ್ಯಾಪಸಂದ್ರ ಗ್ರಾಮಸ್ಥರು ಪ್ರೀತಿಯಿಂದ ನಿತ್ಯಶಾಸಕ ಎಂಬ ಬಿರುದು ನೀಡಿದ್ದಾರೆ. ಬಡವರ ಪರ ಮತ್ತಷ್ಟು ಕೆಲಸಗಳನ್ನು ಮಾಡಲು ಇದು ಪ್ರೇರಣೆಯಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ 1,15 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ದಿಗೆ ಕಾಮಗಾರಿ ಚಾಲನೆ ನೀಡಲಾಗಿದೆ. ಚಿಕ್ಕಮಂಡ್ಯ ಗ್ರಾಮದಲ್ಲಿ 50 ಲಕ್ಷ ರೂ, ದ್ಯಾಪಸಂದ್ರ 30 ಲಕ್ಷ ರೂ, ಬೊಂತೆಕೊಪ್ಪಲಿಗೆ 20 ಲಕ್ಷ ರೂ, ಮಾಚಗೌಡನಹಳ್ಳಿಗೆ 15 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಅಂತೆಯೇ ಇದೇ ಗ್ರಾಮದಲ್ಲಿ ಸೊಸೈಟಿ ಕಾಂಪೌಂಡ್ 16 ಲಕ್ಷ ರೂ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ ವೆಚ್ಚದ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದರು.

ಮುಂದಿನ ದಿಗಳಲ್ಲಿ 2,5 ಕೋಟಿ ರೂ ಟೆಂಡರ್ ಕರೆದಿದ್ದೇವೆ, ರಸ್ತೆಗಳು ಸಿದ್ಧವಾಗಲಿದೆ. ಉಪಮುಖ್ಯಮಂತ್ರಿ ಡಿಕೆಶಿ ನೀಡಿರುವ 100 ಕೋಟಿ ರೂ ಅನುದಾನದಲ್ಲಿ ಗಣಿಗ, ಶಿವಪುರ, ಕೆರೆಬೈಲು ರಸ್ತೆ ದುರಸ್ತಿ ಮಾಡಲಾಗುವುದು. ಶಿವಪುರ ರಸ್ತೆಯ ಕೆರೆ ಏರಿ ಮೇಲೆ ಅಪಘಾತ ತಡೆಯಲು 3 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಲಾಗುವುದು. ಗಣಿಗ ಗ್ರಾಮಕ್ಕೆ 1 ಕೋಟಿ ರೂ ಬಿಡುಗಡೆಯಾಗಿದ್ದು, ಮುಂದಿನ ದಿನದಲ್ಲಿ ಭೂಮಿ ಪೂಜೆ ಮಾಡಲಾಗುವುದು. ಗುಡಿಗೇನಹಳ್ಳಿ ರಸ್ತೆಗೆ 1 ಕೋಟಿ ರೂ ನೀಡಲಾಗಿದ್ದು, ಟೆಂಡರ್ ಆಗಬೇಕಿದೆ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ್, ಲಿಂಗರಾಜು, ಮುಖಂಡರಾದ ಶಂಕರಲಿಂಗೇಗೌಡ, ಚಿಕ್ಕಬಳ್ಳಿ ಕೃಷ್ಣ, ಮಾಯಪ್ಪನಹಳ್ಳಿ ದೊರೆಸ್ವಾಮಿ, ಚೊಟ್ಟನಹಳ್ಳಿ ಶ್ರೀಧರ್, ವಿನಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net