ನಮ್ಮ ಬಾಯಿಗೆ ಮಣ್ಣು ಹಾಕೋಬೇಕಾ: ಕಾವೇರಿ ನೀರಾವರಿ ನಿಗಮದ ವಿರುದ್ಧ ಶಾಸಕ ರವಿಕುಮಾರ್ ಗಣಿಗ ಕೆಂಡಾಮಂಡಲ

Mla-Ravikumar-Ganiga
Published on

ಮಂಡ್ಯ: ಕಟ್ಟುಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರದ ವಿರುದ್ಧ ಮಂಡ್ಯ ಶಾಸಕ ರವಿಕುಮಾರ್ ಗಣಿಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಮೂರ್ಖತನದ ನಿಯಮ. ಡ್ಯಾಂನಲ್ಲಿ ನೀರು ಇಟ್ಟುಕೊಂಡು ನಮ್ಮ ಬಾಯಿಗೆ ಮಣ್ಣು ಹಾಕಿಕೊಳ್ಳಬೇಕಾ?. ಆದೇಶ ನೀಡಿರುವ ಇಂಜಿನಿಯರ್‌ನನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತುಗೊಳಿಸಬೇಕು ಎಂದು ಹರಿಹಾಯ್ದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಭೀಕರ ಬರಗಾಲವಿತ್ತು. ಆದ್ದರಿಂದ ನಿಗಮದ ಪ್ರಕಟಣೆ ಸರಿಯಲ್ಲ. ಫೆಬ್ರವರಿವರೆಗೆ ನೀರು ಸಮಸ್ಯೆ ಇಲ್ಲ ಎಂದು ರೈತರಿಗೆ ಹೇಳುತ್ತಿದ್ದೇನೆ. ನಾವು ಡ್ಯಾಂ ಕಟ್ಟಿರುವುದು ತ.ನಾಡಿಗಲ್ಲ, ನಮ್ಮ ರೈತರಿಗೆ ನೀರು ಕೊಡಲು. ಮಳೆ ಬಂದು ತ.ನಾಡಿಗೆ ಹೆಚ್ಚು ನೀರು ಹೋಗಿದೆ. ಅವರಿಗೆ ಹೆದರಿಕೊಳ್ಳುವಷ್ಟು ನಾವು ಮೂರ್ಖರಲ್ಲ. ಡ್ಯಾಂನಲ್ಲಿ ಸಾಕಷ್ಟು ನೀರಿದೆ. ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವಷ್ಟು ನೀರನ್ನು ಕೊಡುತ್ತೇವೆ. ನಮ್ಮ ಗಮನಕ್ಕೆ ಬಾರದಂತೆ ಆದೇಶ ಹೊರಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಡ್ಯಾಂನಲ್ಲಿ ನೀರು ಇರುವುದರಿಂದ ಕೆರೆಗಳನ್ನು ತುಂಬಿಸಲಾಗುತ್ತಿದೆ. ಈಗಾಗಲೇ ನಿಗಮದ ಮೇಲಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net