ಶಾಸಕ ರವಿಕುಮಾರ್ ಗಣಿಗ ಸಿಟಿರೌಂಡ್ಸ್: ವಿವಿಧೆಡೆ ಕಾಮಗಾರಿ ಪರಿಶೀಲನೆ

MLA Ravikumar inspected the work in the city Mandya
Published on

ಮಂಡ್ಯ: ಅಧಿವೇಶನ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಬೆಂಗಳೂರಿನಲ್ಲಿದ್ದ ಶಾಸಕ ರವಿಕುಮಾರ್ ಗಣಿಗ ಅವರು ನಗರದ ವಿವಿಧೆಡೆ ಭೇಟಿ ನೀಡಿದರು.

ಗುರುಮಠ, ಹೊಸಹಳ್ಳಿ, ಕಾವೇರಿನಗರ, ಗಾಂಧಿನಗರ, ಬೋವಿ ಕಾಲನಿ, ತಾವರೆಗೆರೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಜತೆಗೆ ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಹಳ್ಳಿ ಬಳಿ ಮೀನುಗಳನ್ನು ರಸ್ತೆ ಬದಿಯಲ್ಲಿಯೇ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿ ಶಾಶ್ವತವಾಗಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು. ಹಾಗಾಗಿ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೆ ತಾವರೆಗೆರೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ಚರಂಡಿ ಸೇರಿದಂತೆ ವಿವಿಧ ಕಾಮಗಾರಿಯ ವ್ಯವಸ್ಥೆ ವೀಕ್ಷಣೆ ಮಾಡಿದ್ದೇನೆ. ಹೊಸಹಳ್ಳಿ ಗುರುಮಠದ ಬಳಿ ಇರುವ ಚರಂಡಿ ಎತ್ತರಕ್ಕೆ ಮನವಿ ಸಲ್ಲಿಸಿದ್ದಾರೆ, ಅದನ್ನು ಮಾಡಲಾಗುವುದು. ಹಲವು ಕಡೆ ಅನಗತ್ಯ ಗೋಡೆಗಳನ್ನು ಮೋರಿ ನೀರು ಸರಾಗವಾಗಿ ಹರಿಯುವ ಕಡೆ ಮಾಡಿಕೊಂಡಿರುವುದನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸೂಚಿಸಿದ್ದೇನೆ ಎಂದರು.

ನಗರಸಭೆ ಆಯುಕ್ತ ಆರ್.ಮುಂಜುನಾಥ್, ಸದಸ್ಯರಾದ ರಾಮಲಿಂಗಯ್ಯ, ಮಂಜುನಾಥ್, ಮುಖಂಡರಾದ ಶಿವಲಿಂಗಯ್ಯ, ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net