200 ಕೋಟಿ ರೂನಲ್ಲಿ ನಗರದ ಅಭಿವೃದ್ಧಿ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

MLA Ravikumar drive for development work mandya
Published on

ಮಂಡ್ಯ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ 100 ಕೋಟಿ ರೂಗಳನ್ನು ರಾಜ್ಯಸರ್ಕಾರ ಬಿಡುಗಡೆಗೊಳಿಸಿದೆ. ಮತಷ್ಟು ಅಭಿವೃದ್ಧಿಗಾಗಿ 100 ಕೋಟಿ ರೂಗಾಗಿ ಪ್ರಸ್ತಾವನೆ ಸಲ್ಲಿಸಲು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಇಲ್ಲಿನ ಕುವೆಂಪುನಗರದಲ್ಲಿರುವ ಪ್ರಶಾಂತ ಬಲಮುರಿ ಗಣಪತಿ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, 200 ಕೋಟಿ ರೂ ವೆಚ್ಚದಲ್ಲಿ ಮಂಡ್ಯ ನಗರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ನಗರ ವ್ಯಾಪ್ತಿಯ ಪ್ರಮುಖ ರಸ್ತೆ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಮೂಲಕ ಹೊಸ ಬದಲಾವಣೆಯ ಸ್ವರೂಪವನ್ನು ನಾಗರಿಕರು ಕಾಣಬಹುದು. ಇನ್ನು ದೇವಾಲಯ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂ ಅನುದಾನ ನೀಡಲಾಗುತ್ತಿದೆ ಎಂದರು.

ಪ್ರಶಾಂತ ಬಲಮುರಿ ಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ, ಎಂ.ಕೃಷ್ಣ, ಕುಮಾರಸ್ವಾಮಿ, ವಕೀಲ ಶಿವರಾಮು, ಸಂಪತ್, ರಾಜೇಗೌಡ, ಅಪ್ಪಾಜಪ್ಪ, ಕೆ.ಪಿ.ಶಿವಲಿಂಗಯ್ಯ, ಕಲ್ಲಹಳ್ಳಿ ಆನಂದ್, ಲಕ್ಷ್ಮಣಗೌಡ, ಹೊಸಹಳ್ಳಿ ಶೇಖರ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net