

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸಿದ್ದ ಹಾಗೂ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದ ನೌಕರರಿಗೆ ಕೊಡಬೇಕಿದ್ದ 4ನೇ ವೇತನ ಆಯೋಗದ ಹಣದ ಚೆಕ್ ಅನ್ನು ನಗರದ ಡಿಸಿ ಕಚೇರಿ ಆವರಣದಲ್ಲಿ ಗುರುವಾರ ಶಾಸಕ ರವಿಕುಮಾರ್ ಗಣಿಗ ವಿತರಿಸಿದರು.
ಹಲವು ನೌಕರರಿಗೆ 4ನೇ ವೇತನ ಆಯೋಗದ ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಸಾಲಿನ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಮೊದಲ ಹಂತದಲ್ಲಿ ಎಂಟು ನೌಕರರ ಕುಟುಂಬದವರಿಗೆ ಚೆಕ್ ನೀಡಲಾಯಿತು.
ಈ ವೇಳೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ನಗರ ಬ್ಲಾೃಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಜೈ ಕರ್ನಾಟಕ ಪರಿಷತ್‌ನ ಅಧ್ಯಕ್ಷ ನಾರಾಯಣ ಇತರರಿದ್ದರು.