ಸಂಸದ ಅನಂತ್‌ಕುಮಾರ್ ಹೆಗ್ಡೆ ಮೆಂಟಲ್ ಗಿರಾಕಿ: ಶಾಸಕ ರವಿಕುಮಾರ್ ಗಣಿಗ ಟೀಕೆ

Ravikumar Ganiga
Published on

ಮಂಡ್ಯ: ಸಂಸದ ಅನಂತ್‌ಕುಮಾರ್ ಹೆಗ್ಡೆ ಒಬ್ಬ ಮೆಂಟಲ್ ಗಿರಾಕಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದರೆ ಜನ ಹಿಡಿದುಕೊಂಡು ಹೊಡೆಯುತ್ತಾರೆ ಎಂದು ಶಾಸಕ ರವಿಕುಮಾರ್ ಗಣಿಗ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್‌ಕುಮಾರ್ ಒಬ್ಬ ಹುಚ್ಚ. ನಾಲ್ಕೂವರೆ ವರ್ಷ ಅವರಿಗೆ ಮತ ಕೊಟ್ಟ ಮತದಾರರ ಮರೆತು ಕೋಮಾದಲ್ಲಿ ಕುಂಭಕರ್ಣನಂತೆ ಮಲಗಿದ್ದರು. ಇವಾಗ ಎಲೆಕ್ಷನ್ ಎನ್ನುವ ಊಟ ಬಂದಿದೆ. ಆದ್ದರಿಂದ ಟಿಕೆಟ್‌ಗಾಗಿ ಹುಚ್ಚನ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಜನ ಮೆಚ್ಚಿದ ಮುಖ್ಯಮಂತ್ರಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಆತನಿಗೆ ಇಲ್ಲ. ನಾಲಗೆ ಇದೆ ಎಂದು ಮಾತನಾಡಿದರೆ ಜನ ಸಹಿಸಲ್ಲ. ಆದ್ದರಿಂದ ಮೊದಲು ಮೆಂಟಲ್ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಲಿ, ಆಮೇಲೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲಿ. ನಾಲ್ಕೂವರೆ ವರ್ಷ ಉತ್ತರ ಕರ್ನಾಟಕದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆಂದು ಬೋರ್ಡ್ ಹಾಕಿ ಬಳಿಕ ಸಿಎಂ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net