ಶಾಸಕ ರಾಮದಾಸ್​​ ಬೆನ್ನಿಗೆ ಪ್ರೀತಿಯಿಂದ ಗುದ್ದಿದ ಪಿಎಂ

WhatsApp Image 2022-06-20 at 7.03.05 PM
Published on

ಮೈಸೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪಿಎಂ ನರೇಂದ್ರ ಮೋದಿ, ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಂತರ ಕಾರ್ಯಕ್ರಮದ ವೇದಿಕೆ ಪ್ರವೇಶಿಸಿದ ಅವರು ಭಾಷಣ ಮಾಡುವ ಮೊದಲು ಅಲ್ಲೇ ಇದ್ದ ಶಾಸಕ ರಾಮದಾಸ್ ಅವರನ್ನು ಆತ್ಮೀಯವಾಗಿ ಹತ್ತಿರ ಕರೆದು ಪ್ರೀತಿಯಿಂದ ಬೆನ್ನಿಗೆ ಗುದ್ದಿ ಮಾತನಾಡಿಸಿದರು. ಈ ವೇಳೆ ಶಾಸಕ ರಾಮದಾಸ್ ಕೂಡ ಪಿಎಂ ಮೋದಿ ಅವರಿಗೆ ನಮಸ್ಕರಿಸುವ ಮೂಲಕ ತಮ್ಮ ಆತ್ಮೀಯತೆ ತೋರಿದರು.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿನ ತಮ್ಮ ಕಾರ್ಯಕ್ರಮ ಮುಗಿಸಿಕೊಂಡು ಈಗ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಓವೆಲ್ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಿದ ಮೋದಿ ಸೀದಾ ಮಹಾರಾಜ ಕಾಲೇಜು ಮೈದಾನಕ್ಕೆ ಪ್ರಯಾಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net