

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿ ರುವ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಮಂಗಳವಾರ ಚಾಲನೆ ನೀಡಿದರು.
ಕುವೆಂಪುನಗರ, ವಿವೇಕನಂದಾನಗರ, ಅರವಿಂದ ನಗರ, ಶ್ರೀರಾಂಪುರ 3ನೇ ಹಂತದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಕೆ.ಆರ್. ಕ್ಷೇತ್ರವನ್ನು ಯುಜಿಡಿ ಸಮಸ್ಯೆ ರಹಿತ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕೋಸ್ಕರ 72 ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಮಳೆ ನೀರು ಬಂದಂತಹ ಸಂದರ್ಭ ಎಲ್ಲೆಲ್ಲಿ ಯುಜಿಡಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಗುರುತಿಸಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ 485 ಕಿ.ಮೀ ರಸ್ತೆಯನು ಅಭಿವೃದ್ಧಿ ಪಡಿಸಿ ರಸ್ತೆ ಸುರಕ್ಷಿತ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದೀಗ ಕೈಗೊಂಡಿರುವ ಕಾಮಗಾರಿಗಳು ಜನವರಿ ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ನಗರ ಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಚಂಪಾಕ, ಗೀತಾಶ್ರೀ ಯೋಗಾನಂದ, ಸ್ಥಳೀಯ ಮುಖಂಡರಾದ ರವಿ, ಭಾಸ್ಕರ್, ರೋಹಿತ್, ಸದಾನಂದ, ಲೋಕೇಶ್, ಚೇತನ್, ಪದ್ಮ, ಆಶಾ, ಪುಷ್ಪ, ಕಮಲಮ್ಮ, ಇಂದ್ರೇಶ್, ಗಿರಿಧರ್, ಸಂಪತ್, ಪ್ರಸನ್ನ, ಮಾಯ ಜಗದೀಶ್, ರೂಪ, ಮಹಾದೇವಪ್ಪ, ಕೃಷ್ಣಕುಮಾರ್, ಗೋಪಾಲ್, ವಿನಯ್, ನಾಗೇಶ್, ಗೀತಾ, ನಾಗರತ್ನ ಗೌಡ, ಶಿವರಾಜ್, ಪ್ರಫುಲ್ಲ, ರಾಮನಾಥ್, ಭಾರತೀಶ್, ವಿ.ಕೆ. ಭಟ್, ವೆಂಕಟಕೃಷ್ಣ ಭಟ್, ಚಂದ್ರಶೇಖರ್, ಭಾಗವತ್, ವಿಶಾಲಾಕ್ಷಿ, ಪ್ರಕಾಶ್, ಗಿರೀಶ್, ಸತೀಶ್ ಮಂಜು, ಕೃಷ್ಣ, ಸಿದ್ದರಾಜು, ಮಲ್ಲಣ್ಣ, ಪಾಲಾಕ್ಷ, ಜಯಂತಿ, ವೈರಮುಡಿ, ಪಾಪಣ್ಣ, ಮಹಾದೇವಪ್ಪ, ಮಲೇಶ್ ಹಾಗೂ ಇತರರು ಇದ್ದರು.