ಅಂಗವಿಕಲರಿಗೆ ಸ್ಕೂಟರ್ ವಿತರಿಸಿದ ಶಾಸಕ ಎಸ್.ಎ. ರಾಮದಾಸ್

Ramdas
Published on

ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ಕೃಷ್ಣರಾಜ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಗುರುವಾರ ಶಾಸಕ ಎಸ್.ಎ. ರಾಮದಾಸ್ 9 ಅಂಗವಿಕಲರಿಗೆ ಸ್ಕೂಟರ್‌ಗಳನ್ನು ವಿತರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಮೋದಿ ಯುಗೋತ್ಸವದಲ್ಲಿ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಸ್ಕೂಟರ್‌ಗಳನ್ನು ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಅಂಗವಿಕಲರಿಗೆ 9 ಸ್ಕೂಟರ್‌ಗಳನ್ನು ನೀಡಲಾಗಿದೆ. 9 ಸ್ಕೂಟರ್‌ಗಳಿಗೆ 7.46 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದರು.

ನಗರದಲ್ಲಿ ಇ-ವಾಹನಗಳಿಗೆ ಉತ್ತೇಜನ ನೀಡಲು ಈಗಾಗಲೇ ಪೌರ ಕಾರ್ಮಿಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ನೀಡಲಾಗಿದೆ. ಮುಂ ದಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಟರಿ ಚಾಲಿತ ತಳ್ಳುಗಾಡಿಗಳನ್ನು ನೀಡಲಾಗುವುದು. ಇದಕ್ಕೆ ಫಲಾಭವಿಗಳನ್ನು ಅಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕಮದಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ ಮಾಲಿನಿ, ಬಿಜೆಪಿ ನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಈಶ್ವರ್, ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ, ದೇವರಾಜೇಗೌಡ, ಬಿಎಲ್ಎ-1 ಪ್ರಸಾದ್ ಬಾಬು, ಕಾರ್ಯಾಲಯ ಕಾರ್ಯದರ್ಶಿ ಆದಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net