

ಬೆಂಗಳೂರು: ಕರ್ನಾಟಕ ಸಶಸ್ತ್ರ ಮೀಸಲು ಪಡೆ ಪ್ರದೇಶದ ಆವರಣದಲ್ಲಿ ರೋಟರಿ ಬ್ರಿಗೇಡ್ ಸಂಸ್ಥೆ ವತಿಯಿಂದ ನಿರ್ಮಾಣವಾಗುತ್ತಿರುವ 270 ಹಣ್ಣಿನ ಸಸಿಗಳ ಕಿರು ಉದ್ಯಾನಕ್ಕೆ ಹಣ್ಣಿನ ಸಸಿ ನೆಡುವ ಮೂಲಕ ಶಾಸಕ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಬ್ರಿಗೇಡ್ ಸಂಸ್ಥೆ ಅಧ್ಯಕ್ಷ ಅಶ್ವಿನಿ ಕಿಂಜರ್, ಸದಸ್ಯರಾದ ಸಬರ್ ಮೂರ್ತಿ, ಬಿಂದು ಮತ್ತು ಬಿಪ್ಯಾಕ್ ನಾಗರಿಕ ನಾಯಕಿ ಲಕ್ಷ್ಮಿ ಚಲಪತಿ ಉಪಸ್ಥಿತರಿದ್ದರು.