ನೆಮ್ಮದಿಗೆ ಅಧ್ಯಾತ್ಮ ಚಿಂತನೆ ಅವಶ್ಯ

MLA Rajugowda Patila, Gundakanala, Purapravesha, Dharmasabha, Adhyatma, Talikote,
ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಧರ್ಮಸಭೆಯನ್ನು ಗಣ್ಯರು, ಶ್ರೀಗಳು ಉದ್ಘಾಟಿಸಿದರು. ಶಾಸಕ ರಾಜುಗೌಡ ಪಾಟೀಲ, ಗುರುಲಿಂಗ ಶಿವಾಚಾರ್ಯರು, ಸೋಮಲಿಂಗ ಸ್ವಾಮಿಗಳು, ಚಂದ್ರಶೇಖರ ಸ್ವಾಮಿಗಳು ಇತರರಿದ್ದರು.
Published on

ತಾಳಿಕೋಟೆ: ತೆಲಂಗಾಣ ರಾಜ್ಯದ ಕೊಲ್ಲಿಪಾಕಿಯಲ್ಲಿ ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಲೋಕೋದ್ಧಾರಕ್ಕಾಗಿ ತಿಂಗಳ ಪರ‌್ಯಂತ ಅನುಷ್ಠಾನಗೈದು ಸ್ವಗ್ರಾಮ ಗುಂಡಕನಾಳ ಗ್ರಾಮಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವದಿಸಿದ್ದು ಸಂತಸ ತಂದಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಭಕ್ತರು ಭಾನುವಾರ ಆಯೋಜಿಸಿದ್ದ ಶ್ರೀಗಳ ಪುರಪ್ರವೇಶ ಹಾಗೂ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಗುರುಲಿಂಗ ಶ್ರೀಗಳ ಆಶೀರ್ವಾದ ನನ್ನ ಮೇಲಿದೆ. ರಾಜಕೀಯದಲ್ಲಿ ನೆಮ್ಮದಿ ಇಲ್ಲ, ಅಧ್ಯಾತ್ಮದಲ್ಲಿ ನೆಮ್ಮದಿ ಇದೆ. ಶ್ರೀಗಳ ಮಾರ್ಗದರ್ಶನದಂತೆ ಜನತೆಯ ಋಣ ತೀರಿಸಬೇಕೆಂಬ ಆಸೆ ನನ್ನದಾಗಿದೆ ಎಂದರು.

ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು ಮಾತನಾಡಿ, ಶ್ರೀಗಳು ಮಾಡಿದ ತಪಸ್ಸಿನ ಲ ಎಲ್ಲರಿಗೂ ದೊರೆಯಲಿದೆ ಎಂದರು.
ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರ ಸ್ವಾಮಿಗಳು ಮಾತನಾಡಿ, ಮನುಷ್ಯ ಸ್ವಲ್ಪಮಟ್ಟಿಗಾದರೂ ಅಧ್ಯಾತ್ಮದ ಕಡೆಗೆ ಒಲವು ಹೊಂದಿ ಗುರು ಎಂಬ ಶಕ್ತಿಯನ್ನು ನಂಬಿದರೆ ಕಷ್ಟ- ನಷ್ಟಗಳು ಪರಿಹಾರವಾಗುತ್ತವೆ ಎಂದರು.

ಕೊಡಗಾನೂರದ ಕುಮಾರ ದೇವರು ಮಾತನಾಡಿ, ಅನುಷ್ಠಾನ ಎಂಬುದು ದೇವರ ಸ್ಮರಣೆ ಮಾಡುವುದಾಗಿದೆ ಎಂದರು. ಯಂಕಂಚಿ ಹಿರೇಮಠದ ರುದ್ರಮುನಿ ಶ್ರೀಗಳು, ಮುತ್ತಗಿ ಹಿರೇಮಠದ ವೀರರುದ್ರಮುನಿ ಸ್ವಾಮೀಜಿ ಮಾತನಾಡಿದರು. ಅನುಷ್ಠಾನ ಪೂರೈಸಿ ಆಗಮಿಸಿದ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಮೊದಲಿಗೆ ಗುರುಲಿಂಗ ಶಿವಾಚಾರ್ಯರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆತರಲಾಯಿತು. ಧರ್ಮಸಭೆಯಲ್ಲಿ ಪಾಲ್ಗೊಂಡ ಎಲ್ಲ ಶ್ರೀಗಳು, ಅತಿಥಿಗಳು ಹಾಗೂ ಸಹಾಯ ಸಹಕಾರ ನೀಡಿದ ಸಮಸ್ತ ಗ್ರಾಮದ ಗಣ್ಯರಿಗೆ ಸನ್ಮಾನಿಸಲಾಯಿತು.\

ಇಂಗಳೇಶ್ವರ ಹಿರೇಮಠದ ಭೃಂಗೀಶ್ವರ ಸ್ವಾಮಿಗಳು, ಚಿಮ್ಮಲಗಿ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯರು, ರೇವಣಸಿದ್ದ ಸ್ವಾಮಿಗಳು, ಗಣ್ಯರಾದ ಬಸನಗೌಡ ಗಬಸಾವಳಗಿ, ಸಂಗನಗೌಡ ಪಾಟೀಲ (ದೊಡಮನಿ), ನಿಂಗನಗೌಡ ಪಾಟೀಲ, ಮಲ್ಲನಗೌಡ ಲಕ್ಕುಂಡಿ, ನಾನಾಗೌಡ ಮೇಟಿ, ಸುಬ್ಬನಗೌಡ ಹಳೇಮನಿ, ಸಿದ್ದನಗೌಡ ಬಿರಾದಾರ, ರಾಜುಗೌಡ ಗುಂಡಕನಾಳ, ಮಲ್ಲನಗೌಡ ಹೊಸಮನಿ, ಬಸನಗೌಡ ಪಾಟೀಲ, ಬಸನಗೌಡ ಬಿರಾದಾರ, ಸಂತೋಷ ದೊಡಮನಿ, ಸಿದ್ದಯ್ಯ ಸ್ವಾಮಿಗಳು, ಸೋಮನಗೌಡ ಚಿಂಚೊಳ್ಳಿ, ಸೀಗು ಹಿರೇಮಠ, ಬಸನಗೌಡ ಬನ್ನೆಟ್ಟಿ ಇತರರಿದ್ದರು. ಜೇರಟಿಗಿಯ ಮಡಿವಾಳಯ್ಯ ಶಾಸಿಗಳು ಸ್ವಾಗತಿಸಿದರು. ಬಸಯ್ಯ ಶಾಸಿಗಳು ನಿರೂಪಿಸಿದರು.

ಗವಾಯಿಗಳಾದ ವೇ.ಅಮರಯ್ಯ ಹಿರೇಮಠ, ಸಂಜನಾ ಆಲ್ಯಾಳಮಠ ಹಾಗೂ ಈಶ್ವರ ಬಡಿಗೇರ, ಗುರುಪಾದ ಬಿರಾದಾರ, ಅಕ್ಷತಾ ಬಿರಾದಾರ ಇತರರು ಸಂಗೀತ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net