

ಕೊಪ್ಪಳ:ಈ ಅವಧಿಯಲ್ಲಿ ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಭರವಸೆ ನೀಡಿದರು.
ತಾಲೂಕಿನ ಹಳೇ ಬಂಡಿ ಹರ್ಲಾಪುರ ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಳವಂಡಿ-ಬೆಗಟೆರಿ, ಬಹದ್ದೂರ ಬಂಡಿ-ನವಲಕಲ್ ಏತ ನೀರಾವರಿ, ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಈ ಮೂಲಕ ಕ್ಷೇತ್ರವನ್ನು ನೀರಾವರಿಗೆ ಒಳಪಡಿಸಲಾಗುವುದು.
ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಯೋಜನೆಗಳಿಗೆ ಅನುದಾನ ನೀಡಲಿಲ್ಲ. ಸದ್ಯ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಅನುದಾನ ತಂದು ಪೂರ್ಣಗೊಳಿಸುವೆ. ಕೆಕೆಆರ್‌ಡಿಬಿಯಿಂದ 85 ಕೋಟಿ ರೂ. ಅನುದಾನ ಬಂದಿದೆ. ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಚೆಕ್ ವಿತರಣೆ: ಅಗ್ನಿ ಅವಘಡದಿಂದ ಅಂಗಡಿ ಸುಟ್ಟು ನಷ್ಟಕ್ಕೆ ಒಳಗಾಗಿದ್ದವರಿಗೆ ನಗರಸಭೆಯಿಂದ ಪರಿಹಾರ ಚೆಕ್‌ನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ವಿತರಿಸಿದರು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸದಸ್ಯ ಮುತ್ತುರಾಜ ಕುಷ್ಟಗಿ, ರಾಮಣ್ಣ ಕಲ್ಲನವರ ಇತರರಿದ್ದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್, ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ,
ಪ್ರಮುಖರಾದ ಕೆ.ಎಂ. ಸೈಯ್ಯದ್, ಯಂಕಪ್ಪ ಹೊಸಳ್ಳಿ, ಈರಣ್ಣ ಹುಲಿಗಿ, ಯಮನೂರಪ್ಪ ಬಸಾಪುರ, ಧರ್ಮಣ್ಣ ಕಂಪಸಾಗರ, ಶರಣಪ್ಪ ಉಪ್ಪಾರ, ಅಶೋಕ ಹಿಟ್ನಾಳ್ ಇತರರಿದ್ದರು.