ಮನೆ ಮನೆಗೆ ಸ್ಟಿಕರ್ ಹಚ್ಚಿದ ಶಾಸಕ

h31-tenginakai
Published on

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 40ರ ಸಂತೋಷ ನಗರದ ಮನೆ ಮನೆಗೆಎ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ, ನನ್ನ ಪರಿವಾರ ಮೋದಿ ಪರಿವಾರ ಸ್ಟಿಕರ್‌ಗಳನ್ನು ಭಾನುವಾರ ಹಚ್ಚಿದರು. ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಧನೆ, ಅಭಿವೃದ್ಧಿ ಪರ ಇರುವ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net