ರೇವಣ್ಣ ಟೀಕೆಗಳನ್ನು ಸಲಹೆಯಾಗಿ ಸ್ವೀಕರಿಸುವೆ

download
Published on



ವಿಜಯವಾಣಿ ಸುದ್ದಿಜಾಲ ಹಾಸನ
ಹೊಸ ಅಧಿಕಾರಿಗಳನ್ನು ನೇಮಿಸಿದರೆ ವರ್ಗಾವಣೆ ದಂಧೆ ಎನ್ನುತ್ತಾರೆ, ಅವರೇ ವರ್ಗ ಮಾಡಿಸಿದ ಅಧಿಕಾರಿಗಳಿಗೂ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನ ಉಪನೋಂದಣಾಧಿಕಾರಿ ಭ್ರಷ್ಟ ಎಂದು ಆರೋಪಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಟೀಕೆಗಳನ್ನು ನಾನು ಸಲಹೆಯಾಗಿ ಸ್ವೀಕರಿಸಿ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹೊಳೆನರಸೀಪುರದಲ್ಲಿದ್ದ ಉಪನೋಂದಣಾಧಿಕಾರಿಯನ್ನು ಹಾಸನಕ್ಕೆ ವರ್ಗ ಮಾಡಿಸಿದ್ದು ಇದೇ ರೇವಣ್ಣ. ಆದರೆ ಈಗ ಆ ಅಧಿಕಾರಿ ಭ್ರಷ್ಟ ಎಂದು ಕರೆಯುತ್ತಿದ್ದಾರೆ. ಹಾಗಂತ ಹೊಸ ಅಧಿಕಾರಿಗಳನ್ನು ನಿಯೋಜಿಸಿದರೆ ಅದಕ್ಕೆ ವರ್ಗಾವಣೆ ದಂಧೆ ಎನ್ನುತ್ತಾರೆ. ಈ ರೀತಿಯ ರಾಜಕಾರಣ ಯಾಕೆ ಎಂದು ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದರು.
ಬಿಜೆಪಿಗೆ ಅಧಿಕಾರ ಖಚಿತ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾವ ವರ್ಗಕ್ಕೆ ಮೀಸಲಾದರೂ ಬಿಜೆಪಿ ಸದಸ್ಯರೊಬ್ಬರು ಅಧ್ಯಕ್ಷರಾಗುವುದು ಖಚಿತ. ಇದಕ್ಕೆ ಎಲ್ಲ ಸದಸ್ಯರು ಬೆಂಬಲಿಸುತ್ತಾರೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.
ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಎಸ್ಸಿ, ಎಸ್ಟಿ, ಸಾಮಾನ್ಯ, ಮಹಿಳೆ ಹೀಗೆ ಯಾವ ವರ್ಗಕ್ಕೆ ಮೀಸಲಾತಿ ನಿಗದಿಯಾದರೂ ಬಿಜೆಪಿಯವರೇ ಅಧ್ಯಕ್ಷರಾಗುತ್ತಾರೆ. ಇದರಿಂದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net