

ಮಂಡ್ಯ: ತಾಲೂಕಿನ ಮಲ್ಲಘಟ್ಟ ಗ್ರಾಮದ ಕೆರೆತುಂಬಿ ಕೋಡಿ ಬಿದ್ದ ಹಿನ್ನಲೆ ಶಾಸಕ ರವಿಕುಮಾರ್ ಗಣಿಗ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ಹಲವು ವರ್ಷದಿಂದ ಕೆರೆ ತುಂಬದೇ ನೀರಿನ ಸಮಸ್ಯೆ ಈ ಭಾಗದ ಜನರಲ್ಲಿ ಹೆಚ್ಚು ಕಾಡುತ್ತಿತ್ತು. ಈ ವರ್ಷ ಮಳೆ ಸಂತೃಪ್ತಿಯಾಗಿ ಗ್ರಾಮದವರೆಲ್ಲ ಸೇರಿ ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದ್ದಾರೆ. ಅಂದಾಜು 77 ಎಕರೆ ಇರುವ ಈ ಕೆರೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಟೆಂಡರ್ ಕರೆದು ಅಭಿವೃದ್ಧಿ ಪಡಿಸಲಾಗುವುದು. ಈ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ರೈತರು ಫಲವತ್ತಾಗುವ ಬೆಳೆ ಬರುವ ಮುನ್ಸೂಚನೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.
ಉಪ್ಪಾರಕನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ಚಿಕ್ಕಯ್ಯ, ಮುಖಂಡರಾದ ಸಿದ್ದರಾಜು, ಕರೀಗೌಡ, ಸಿ.ಯೋಗಾನಂದ, ಗುರುಸ್ವಾಮಿ, ಅಶ್ವಥ್, ರಾಮಕೃಷ್ಣ ಇತರರಿದ್ದರು.