ಕೂಟಿಯಾಲ ಸೇತುವೆ ವೀಕ್ಷಿಸಿದ ಶಾಸಕ ಪೊನ್ನಣ್ಣ

ಕೂಟಿಯಾಲ ಸೇತುವೆ ಪರಿಶೀಲಿಸಿದ ಶಾಸಕ ಎ.ಎಸ್.ಪೊನ್ನಣ್ಣ. ಈ ವೇಳೆ ಲಾಲಾ ಅಪ್ಪಣ್ಣ, ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ, ರೋಹಿತ್, ಅನು, ಅಯ್ಯಪ್ಪ, ಜಗನ್, ರಾಜ ಇತರರು ಇದ್ದರು.
ಕೂಟಿಯಾಲ ಸೇತುವೆ ಪರಿಶೀಲಿಸಿದ ಶಾಸಕ ಎ.ಎಸ್.ಪೊನ್ನಣ್ಣ. ಈ ವೇಳೆ ಲಾಲಾ ಅಪ್ಪಣ್ಣ, ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ, ರೋಹಿತ್, ಅನು, ಅಯ್ಯಪ್ಪ, ಜಗನ್, ರಾಜ ಇತರರು ಇದ್ದರು.
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ಬಿ ಶೆಟ್ಟಿಗೇರಿಯ ಕೂಟಿಯಾಲ ಸೇತುವೆಯನ್ನು ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಬುಧವಾರ ಪರಿಶೀಲಿಸಿದರು.

ಕೂಟಿಯಾಲ ರಸ್ತೆ ಹಾಗೂ ಸೇತುವೆ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿಜ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಪರ್ಯಾಯ ಮಾರ್ಗ ಒದಗಿಸುವ ಬಗ್ಗೆಯೂ ಸಹ ಚರ್ಚಿಸಿದರು. ಬಳಿಕ ಎಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಿ ಅತಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಗರ್‌ಹುಕುಂ ತಾಲೂಕು ಸಮಿತಿ ಅಧ್ಯಕ್ಷರಾದ ಲಾಲಾ ಅಪ್ಪಣ್ಣ, ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ, ರೋಹಿತ್, ಅನು, ಅಯ್ಯಪ್ಪ, ಜಗನ್, ರಾಜ, ಈರಪ್ಪ, ನಂದ, ಅಣ್ಣಳಮಾಡ ಹರೀಶ್, ಕುಪ್ಪಣ್ಣಮಾಡ ಪ್ರೀತಮ್, ಜೀತು, ರಶೀದ್, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net