ಮೃತ ಸಿದ್ದನಗೌಡ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ

santvan
ಢವಳಗಿ ಗ್ರಾಮದಲ್ಲಿ ಇತ್ತೀಚೆಗೆ ನಿಧನರಾದಸಿದ್ದನಗೌಡ ಬಿರಾದಾರ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮೃತರ ಮಗ ಮಹಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ ಮತ್ತಿತರರಿದ್ದರು.
Published on

ಢವಳಗಿ: ಗ್ರಾಮದಲ್ಲಿ ಇತ್ತೀಚೆಗೆ ನಿಧನರಾದ ಸಮಾಜ ಸೇವಕ ಸಿದ್ದನಗೌಡ ಬ. ಬಿರಾದಾರ ಕುಟುಂಬಕ್ಕೆ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಭೇಟಿ ನೀಡಿ ಸದಸ್ಯರಿಗೆ ಸಾಂತ್ವನ ಹೇಳಿದರು.

ಸಮಾಜಕ್ಕೆ ಸಿದ್ದನಗೌಡ ಅವರ ಕೊಡುಗೆ ಅಪಾರವಾಗಿದೆ. ಅವರು ಸದಾ ಎಲ್ಲರೊಂದಿಗೂ ಇರುತ್ತಾರೆ. ಕುಟುಂಬ ಸದಸ್ಯರು ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗಬೇಕು ಎಂದು ತಿಳಿಸಿದರು.

ನಾನಗೌಡ ಕೊಣ್ಣೂರ, ಬಾಪೂಗೌಡ ಪಾಟೀಲ(ಅಂಗಡಗೇರಿ), ವಿನೋದ ಕೊಣ್ಣೂರ, ಪ್ರಭು ಜಮಾದಾರ, ಎಸ್. ಎಸ್. ಪಾಟೀಲ, ಶಾಂತಗೌಡ, ಬಸನಗೌಡ ಹಂದ್ರಾಳ, ಆದಪ್ಪಗೌಡ ಬಳವಾಟ, ಗುರುಗೌಡ ಬಾಂಬೆಗೌಡ್ರು, ಮುರಿಗೆಪ್ಪಗೌಡ, ಚಿನ್ನುದಣಿ ಹಾಗೂ ಮೃತರ ಮಗ ಮಹಾಂತಗೌಡ ಬಿರಾದಾರ, ಸಹೋದರಾದ ರಾಮನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net