ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಕ್ರಮ

14pnd4
Published on

 ಪಾಂಡವಪುರ: ತಾಲೂಕಿನ ಕನಗನಮರಡಿ, ಅರಳಕುಪ್ಪೆ ಹಾಗೂ ಕಾವೇರಿಪುರ ಗ್ರಾಮದಲ್ಲಿ ಎಸ್‌ಸಿಪಿ ಯೋಜನೆಯಡಿಯಲ್ಲಿ 1.05 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರೂ ಸಹಕಾರ ನೀಡಬೇಕು. ಆಗ ಮಾತ್ರ ಗುಣಮಟ್ಟ ಪಾಲನೆ ಸಾಧ್ಯವಾಗಲಿದೆ ಎಂದರು. ಸಮಾಜಕಲ್ಯಾಣ ಇಲಾಖೆಯ ಎಸ್‌ಸಿಪಿ ಯೋಜನೆಯಡಿ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ 58 ಲಕ್ಷ, ಅರಳಕುಪ್ಪೆ ಗ್ರಾಮದಲ್ಲಿ 18.50ಲಕ್ಷ ಹಾಗೂ ಕಾವೇರಿಪುರ ಗ್ರಾಮದಲ್ಲಿ 28 ಲಕ್ಷರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು. ಪರಿಶಿಷ್ಟರ ಕಾಲನಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಗ್ರಾಮದ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ವಿವಿಧ ಸಂಘ, ಸಂಸ್ಥೆಗಳ ಮುಖಂಡರಾದ ಕಣಿವೆರಾಮು, ಬನ್ನಂಗಾಡಿ ಬಿ.ಜೆ.ಸ್ವಾಮಿ, ನಾಗೇಂದ್ರ, ಲಾಲ್‌ಬಹದ್ದೂರ್, ಕಿರಣ್, ಮಂಜು, ಗ್ರಾಪಂ ಸದಸ್ಯ ಕಿಟ್ಟಿ, ಅರಳಕುಪ್ಪೆ ದೇವರಾಜು, ಅಶೋಕ್, ವೆಂಕಟರಾಮು, ಗಣೇಶ್, ಚಿನ್ನಮುತ್ತು, ಜಗದೀಶ್, ಸೋಮಶೇಖರ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net