ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಸಹಕಾರಿ

01 SVL
Published on

 ಸಾಸ್ವೆಹಳ್ಳಿ: ಕೃಷಿ ಮತ್ತು ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಸಾಸ್ವೆಹಳ್ಳಿಯಲ್ಲಿ ಶುಕ್ರವಾರ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಹಾಗೂ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ಸಾಕಷ್ಟು ಕುಟುಂಬಗಳು ನಮ್ಮ ಭಾಗದಲ್ಲಿದ್ದು, ರೈತರ ಆರ್ಥಿಕ ಸ್ವಾವಲಂಬನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

ಕೆಎಂಎಫ್ ನಿರ್ದೇಶಕರಾದ ಬಿ.ಜಿ.ಬಸವರಾಜಪ್ಪ, ಜಗದೀಶಪ್ಪ ಬಣಕಾರ್, ಎಚ್.ಕೆ. ಬಸಪ್ಪ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್, ತಾಲೂಕು ವಿಸ್ತರಣಾಧಿಕಾರಿ ಶ್ವೇತಾ, ಸಹಕಾರ ಸಂಘಗಳ ತಾಲೂಕು ಅಧಿಕಾರಿ ಕೆ.ಜಿ. ನವೀನ್ ಕುಮಾರ್, ಗ್ರಾಪಂ ಅಧ್ಯಕ್ಷ ಜಬ್ಬರ್ ಅಲಿಖಾನ್ ಇತರರಿದ್ದರು. 150 ಮಹಿಳೆಯರಿಗೆ ಸ್ಟೀಲ್ ಕ್ಯಾಟಲಿಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net