ಕೊಂಡಶೆಟ್ಟಹಳ್ಳಿಯಲ್ಲಿ ನಂದಿನಿ ಪಾರ್ಲರ್​ ತೆರೆಯಲು ಶಾಸಕ ನಂಜೇಗೌಡ ಸೂಚನೆ

NANJEGOWDA
Published on

ಟೇಕಲ್: ಕೊಮುಲ್​ ವ್ಯಾಪ್ತಿ ಪ್ರದೇಶವೊಂದರಲ್ಲಿ ಖಾಸಗಿ ಡೇರಿಯ ಹಾಲು ಬಳಸುತ್ತಿರುವುದನ್ನು ಕಂಡ

ಮಾಲೂರು ಶಾಸಕ ಹಾಗೂ ಕೊಚಿಮುಲ್​ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರು ತಕ್ಷಣ ಆ ಊರಲ್ಲಿ ನಂದಿನಿ ಪಾರ್ಲರ್​ ಆರಂಭಿಸಲು ಸೂಚನೆ ನೀಡಿದ್ದಾರೆ.

ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರು ಮಾಲೂರು ತಾಲೂಕು ಕೊಂಡಶೆಟ್ಟಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಚಹಾ ಕುಡಿಯಲು ಅಂಗಡಿಯೊಂದಕ್ಕೆ ಹೋದರು. ಅಲ್ಲಿ ಖಾಸಗಿ ಡೇರಿಯ ಹಾಲು ಮಾರಾಟ ಆಗುತ್ತಿತ್ತು. ಅದನ್ನು ಗಮನಿಸಿದ ಶಾಸಕರು ಮಾಲೀಕರನ್ನು ವಿಚಾರಿಸಿದಾಗ ಅಲ್ಲಿಗೆ ಕೋಮುಲ್​ನಿಂದ ಹಾಲು ಸರಬರಾಜು ಆಗುತ್ತಿಲ್ಲ ಎಂದು ತಿಳಿಯಿತು. ತಕ್ಷಣ ನಂಜೇಗೌಡ ಅವರು ಹಾಲು ಒಕ್ಕೂಟದ ಮಾರ್ಕೆಟಿಂಗ್​ ಅಧಿಕಾರಿಗೆ ೋನ್​ ಮಾಡಿ ಕೊಂಡಶೆಟ್ಟಿಹಳ್ಳಿಯಲ್ಲಿ ಪಾರ್ಲರ್​ ತೆರೆದರೆ ದಿನಕ್ಕೆ 200ಕ್ಕೂ ಅಧಿಕ ಲೀಟರ್​ ಹಾಲು ಮಾರಾಟವಾಗುತ್ತದೆ. ವಾರದೊಳಗೆ ಆದ್ಯತೆ ಮೇರೆಗೆ ಪಾರ್ಲರ್​ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದರು.

ಗ್ರಾಪಂ ಸದಸ್ಯ ಗೌರು, ಮಾಜಿ ಸದಸ್ಯ ವೆಂಕಟರವಣಪ್ಪ, ಮುಖಂಡ ಮುನಿರಾಜು ಹಾಗೂ ಕೊಂಡಶೆಟ್ಟಹಳ್ಳಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net