

ಯಾದಗಿರಿ: ಗುರುಮಠಕಲ್ ಕಂದಕೂರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿದು ಮೃತಪಟ್ಟಿದ್ದ ಮಹಿಳೆಯ ಕುಟುಂಬಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಶನಿವಾರ 5ಲಕ್ಷ ರೂ.ಪರಿಹಾರ ಧನದ ಚೆಕ್ ವಿತರಿಸಿದರು.
ಮುಂಗಾರು ಆರಂಭದಲ್ಲಿಯೇ ನಿರಂತರವಾಗಿ ಸುರಿದ ಮಳೆಗೆ ಮನೆ ಕುಸಿದು ಸಾವಿತ್ರಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು ಅತ್ಯಂತ ನೋವಿನ ಸಂಗತಿ. ತೀರಾ ಹಳೆಯದಾದ ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರು ಮಳೆಗಾಲದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಹಳೆಯ ಹಾಗೂ ಶಿಥಿಲ ಮನೆಗಳು ತುಂಬಾ ಅಪಾಯಕಾರಿ ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತಕ್ಷೇತ್ರದ ಜನರಿಗೆ ಸಲಹೆ ನೀಡಿದರು.
ಕಂದಾಯ ನಿರೀಕ್ಷಕ ಸುಭಾಷ, ಅಶೋಕರೆಡ್ಡಿ, ಸಾಬಣ್ಣ, ನಿಂಗಪ್ಪ, ಬಾಬು, ನರಸಪ್ಪ, ಭಾಸ್ಕರ್ ಸೇರಿ ಮುಂತಾದವರಿದ್ದರು.