ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಶ್ರಮ: ಶಾಸಕ ಎಚ್.ಟಿ.ಮಂಜು ಭರವಸೆ

1 (2)
Published on

ಕೆ.ಆರ್.ಪೇಟೆ: ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕಾರ್ಯಕ್ರಮಗಳನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ಭರವಸೆ ನೀಡಿದರು.

ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ, ಚೌಡೇನಹಳ್ಳಿ, ನಾರ್ಗೋನಹಳ್ಳಿ, ಕಾಮನಹಳ್ಳಿ, ಮೊಸಳೆಕೊಪ್ಪಲು, ಬೂವನಹಳ್ಳಿ, ಹೆಮ್ಮಡಹಳ್ಳಿ, ಬಳೇಕೆರೆ, ಹಳಿಯೂರು, ನಾಟನಹಳ್ಳಿ, ವಿಠಲಾಪುರ, ಮತ್ತಿಘಟ್ಟ, ಯಡಹಳ್ಳಿ, ಕಾಳೇಗೌಡನ ಕೊಪ್ಪಲು, ದೊಡ್ಡನಕಟ್ಟೆ, ಕಾಪನಹಳ್ಳಿ, ಪಿ.ಡಿ.ಜಿ. ಕೊಪ್ಪಲು, ಕೂಡಲಕುಪ್ಪೆ, ವಿಠಲಾಪುರ, ಯಗಚಗುಪ್ಪೆ, ಚಿಕ್ಕಗಾಡಿಗನಹಳ್ಳಿ, ಶೆಟ್ಟಹಳ್ಳಿ, ಅರಳ ಕುಪ್ಪೆ, ಬೂಕನಕರೆ, ವಿಜಯ್ ಹೊಸಹಳ್ಳಿ, ಕೀಲನಕೊಪ್ಪಲು, ಬಿ.ಬಾಚಹಳ್ಳಿ, ಮೋದೂರು, ಬೊಮ್ಮೇಗೌಡನಕೊಪ್ಪಲು, ಹೊಸಕೊಪ್ಪಲು, ರಂಗನಾಥಪುರ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ತಾಲೂಕಿನ ಪ್ರತಿ ಗ್ರಾಮದಲ್ಲೂ ಕಾರ್ಯಕರ್ತರು, ಗ್ರಾಮಸ್ಥರು ನನಗೆ ಸಹೋದರನ ಗೌರವ ತೋರಿಸುತ್ತಿದ್ದಾರೆ. ನಾನು ನನ್ನ ಜೀವನ ಇರುವವರೆಗೂ ಕ್ಷೇತ್ರದ ಜನರ ಸೇವೆಯನ್ನು ಪಕ್ಷಾತೀತವಾಗಿ ಮಾಡುವೆ. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿ ಅವರ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಳ್ಳಿ ನಾಗೇಶ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ರಾಮಚಂದ್ರು, ಜೆಡಿಎಸ್ ಮುಖಂಡ ಹುಲ್ಲೆಗೌಡ, ಬೂಕನಕೆರೆ ಹೋಬಳಿಯ ಜೆಡಿಎಸ್ ಅಧ್ಯಕ್ಷ ಬಲ್ಲೇನಹಳ್ಳಿ ನಂದೀಶ್, ಮುಖಂಡ ಚೌಡೇನಹಳ್ಳಿ ನಾಗರಾಜು, ಬಳ್ಳೆಕೆರೆ ಕುಮಾರ್, ಚಿಕ್ಕಗಾಡಿಗನಹಳ್ಳಿ ಪರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net