

ದಲ್ಲಾಳಿಗಳಿಗೆ ಶುಂಠಿ ಮಾರಾಟ ಮಾಡಬೇಡಿ
ಕೆ.ಆರ್.ಪೇಟೆ: ಯಾವ ಸಭೆಗೆ ಹೋಗಬೇಕು, ಹೋಗಬಾರದು ಎಂದು ನನಗೆ ಗೊತ್ತು. ಅದನ್ನು ಇತರರಿಂದ ಹೇಳಿಸಿಕೊಳ್ಳುವ ಮಟ್ಟದಲ್ಲಿ ನಾನು ಇಲ್ಲ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.ಮನ್ಮುಲ್ ನಿರ್ದೇಶಕ ಡಾಲು ರವಿ ನನ್ನ ಬಗ್ಗೆ ಸಲ್ಲದ ಟೀಕೆ ಮಾಡಿದ್ದಾರೆ. ಗ್ರಾಪಂ ಕೆಪಿಪಿ ಸಭೆಗೆ ಡೇರಿ ಕಾರ್ಯದರ್ಶಿಗಳು ಹೋಗುವಂತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ತಿಂಗಳಲ್ಲಿ 24 ದಿನ ಹಾಲು ನಷ್ಟವಾಗಿದೆ ಎಂದು ಗೋಂದಿಹಳ್ಳಿ ರೈತರು ಸಮಸ್ಯೆ ಹೇಳಿಕೊಂಡ ಕಾರಣಮಾದಾಪುರ ಗ್ರಾಪಂ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆ ಆಲಿಸಿದ್ದೀನಿ. ಇದಕ್ಕೆ ಮನ್ಮುಲ್ ನಿರ್ದೇಶಕ ಡಾಲು ರವಿ ಟೀಕೆ ವ್ಯಕ್ತ ಪಡಿಸಿದ್ದಾರೆ. ಇದು ಸಲ್ಲದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.
ದಲ್ಲಾಳಿಗಳಿಗೆ ಶುಂಠಿ ಮಾರಾಟ ಮಾಡಬೇಡಿ: ರೈತರು ಶುಂಠಿ ಬೆಳೆಯನ್ನು ದಲ್ಲಾಳಿಗಳಿಗೆ ಮಾರಾಟ ಮಾಡಬಾರದು ಎಂದು ಶಾಸಕ ಮಂಜು ತಿಳಿಸಿದರು. ದಲ್ಲಾಳಿಗಳಿಂದ ಶುಂಠಿ ದರ ಕುಸಿದಿದೆ. ಶುಂಠಿ ಬೆಳೆಗೆ ಸರ್ಕಾರ ಬೆಂಬಲ ದರ ನಿಗದಿ ಮಾಡಿದೆ. ಟಿಎಪಿಸಿಎಂಎಸ್‌ನಲ್ಲಿ ಶುಂಠಿ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ರೈತರಿಂದ ನೋಂದಣಿ ಪ್ರಕ್ರಿಯೆ ನಂತರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ಹಾಗಾಗಿ ದಲ್ಲಾಳಿಗಳಿಗೆ ಶುಂಠಿ ಮಾರಬಾಋದು ಎಂದು ರೈತರಿಗೆ ಮನವಿ ಮಾಡಿದರು. ಮುಖಂಡರಾದ ಹುಲ್ಲೇಗೌಡ, ಕುರಬಹಳ್ಳಿ ನಾಗೇಶ, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ, ತಾಪಂ ಮಾಜಿ ಸದಸ್ಯ ಹೊಸಹೊಳಲು ರಾಜು ಇತರರು ಹಾಜರಿದ್ದರು.