ಅಭಿವೃದ್ಧಿಗೆ ಸ್ಪಂದಿಸದಿದ್ದರೆ ಅಧಿಕಾರಿಗಳ ಬದಲಾವಣೆ

Untitled design(25)
ಲಿಂಗಸುಗೂರು ಪುರಸಭೆ ಸಭಾಂಗಣದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಜರುಗಿತು. ಸಿಒ ರಡ್ಡಿ ರಾಯನಗೌಡ ಇದ್ದರು.
Published on

ಲಿಂಗಸುಗೂರು: ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ದಿನನಿತ್ಯ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಶಾಸಕ ಮಾನಪ್ಪ ವಜ್ಜಲ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧಿಕಾರಿ, ಸಿಬ್ಬಂದಿಗಳ ಸಭೆಯ ಅಧ್ಯಕ್ಷತೆವಹಿಸಿ ಸೋಮವಾರ ಮಾತನಾಡಿದರು. ಪಟ್ಟಣದ ರಾಜ ಕಾಲುವೆ ಸಮೀಕ್ಷೆ ಕೈಗೊಂಡು ಒತ್ತುವರಿ ತೆರವು ಕಾರ್ಯ ಮಾಡಬೇಕು. ಅಭಿವೃದ್ಧಿ ಜತೆಗೆ ಸ್ವಚ್ಛತೆಗೆ ಒತ್ತು ನೀಡಬೇಕು ಎಂದರು.

ಬಲದಂಡೆ ನಾಲೆಯಿಂದ ಕೆರೆಗೆ ನೀರು ಭರ್ತಿ ಮಾಡಿ

ಬಲದಂಡೆ ನಾಲೆಯಿಂದ ಕೆರೆಗೆ ನೀರು ಭರ್ತಿ ಮಾಡಲು ಅವಕಾಶವಿದೆ. ಆದರೂ ಪುರಸಭೆ ವಾರ್ಡ್‌ಗಳಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲು ಕಾರಣವೇನು? ಪಟ್ಟಣದ ಮಧ್ಯಭಾಗದ ರಾಜಕಾಲುವೆ ಒತ್ತುವರಿಯಾಗಿ ಕಟ್ಟಡಗಳು ನಿರ್ಮಿಸಲಾಗಿದೆ ಎಂಬ ದೂರುಗಳಿವೆ. ಬಸ್ ನಿಲ್ದಾಣ ಮುಂಭಾಗದ ಮುಖ್ಯರಸ್ತೆ ಅಗಲೀಕರಣ ಮತ್ತು ನಗರೋತ್ಥಾನ ಕಾಮಗಾರಿಗಳ ವಿಳಂಬಕ್ಕೆ ಕಾರಣವೇನು ಎಂಬುದರ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಹಳೆಯ ಪೈಪ್ ಲೈನ್ ನಿಂದ ದಿನ ನೀರು ಪೂರೈಕೆಯಲ್ಲಿ ಸಮಸ್ಯೆ

ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಮಾತನಾಡಿ, ಕಳೆದ 2005 ರಲ್ಲಿ ಅಂದಿನ ಜನಸಂಖ್ಯೆ ಆಧರಿಸಿ ಕೆರೆ, ಮದರ್ ಟ್ಯಾಂಕ್, 10 ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ. ಕಸಬಾಲಿಂಗಸುಗೂರು ಟ್ಯಾಂಕ್ ಭರ್ತಿಗೆ ದಿನಕ್ಕೆ 16 ಗಂಟೆ ಸಮಯ ಬೇಕಾಗುತ್ತದೆ. ಪೈಪ್‌ಲೈನ್‌ಗಳು ಹಳೆಯದಾಗಿದೆ. ಹೀಗಾಗಿ ದಿನನಿತ್ಯ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಜಲ ಜೀವನ ಮಷಿನ್ ಯೋಜನೆ ಅನುಷ್ಠಾನಗೊಂಡರೆ ನಿತ್ಯ ಪೂರೈಸಲು ಸಾಧ್ಯ.

ರಾಜಕಾಲುವೆ ಸರ್ವೇ ಮತ್ತು ಜೆಸಿಬಿ ಯಂತ್ರದಿಂದ ಗಿಡಗಂಟಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ನಗರೋತ್ಥಾನ ಕಾಮಗಾರಿ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ.

ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಪಿಡಬ್ಲುೃಡಿ ಇಲಾಖೆಗೆ ವಹಿಸಲಾಗಿದೆ ಎಂದು ಎಂದರು.
ಶಾಸಕ ಮಾನಪ್ಪ ವಜ್ಜಲ್, ಪುರಸಭೆ ವ್ಯಾಪ್ತಿಗೆ ದಿನನಿತ್ಯ ಕುಡಿಯುವ ನೀರು ಪೂರೈಸಲು ಜಲ ಜೀವನ ಮಷಿನ್ ಯೋಜನೆ ಇನ್ನು ಟೆಂಡರ್ ಆಗಿಲ್ಲ.

ಅಲ್ಲಿಯವರೆಗೆ ಕಾಯುವುದು ಬೇಡ. ಕೂಡಲೇ ಪೈಪ್‌ಲೈನ್ ಮತ್ತು ಮೋಟಾರ್ ಪಂಪ್ ಬದಲಾಯಿಸಬೇಕು. ರಾಜಕಾಲುವೆ ಸರ್ವೇಗೆ ಎಸಿ ಮತ್ತು ಡಿಸಿ ಅವರಿಗೆ ಪತ್ರ ಬರೆಯಬೇಕು. ಒತ್ತುವರಿ ತೆರವುಗೊಳಿಸಿ ಗಿಡಗಂಟಿಗಳ ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ನೆರೆ ಬಂದರೆ ಮನೆಗಳಿಗೆ ನೀರು ನುಗ್ಗಲಿದೆ. ಇದಕ್ಕೆ ಆಸ್ಪದ ನೀಡಬೇಡಿ ಎಂದು ಸೂಚಿಸಿದರು.

ಬಸ್ ನಿಲ್ದಾಣ ಮುಖ್ಯರಸ್ತೆ 50 ಅಡಿ ಅಗಲೀಕರಣಕ್ಕೆ ಅಡೆತಡೆಗಳಿದ್ದರೆ ಅಥವಾ ಪ್ರಭಾವಿ ವ್ಯಕ್ತಿಗಳ ಒತ್ತಡವಿದ್ದರೆ ತಿಳಿಸಬೇಕು. ಪೊಲೀಸ್ ಮತ್ತು ತಾಲೂಕು ಆಡಳಿತದ ನೆರವು ನೀಡಲಾಗುವುದು. ಶಾಸಕರ ಮಾದರಿ ಶಾಲೆ, ಕಾಲೇಜು ಸೇರಿ ಇತರೆ ಮುಖ್ಯರಸ್ತೆ ಬೀದಿ ಬದಿ ಡಬ್ಬಾ ಅಂಗಡಿಯಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ.

ಕೂಡಲೇ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ನಗರೋತ್ಥಾನ ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವಂತೆ ಶಾಸಕರು ಸೂಚಿಸಿದರು.


ಪುರಸಭೆಯ 24 ವಾರ್ಡ್‌ಗಳಲ್ಲಿ ಪೈಕಿ 12ರಲ್ಲಿ ಕೇವಲ ಒಬ್ಬ ಸೆಕ್ಷನ್ ಅಧಿಕಾರಿ ನೇಮಿಸಿದರೆ ನಿರ್ವಹಣೆ ಮತ್ತು ಸಾರ್ವಜನಿಕರ ಸಮಸ್ಯೆ ನೀಗಿಸಲು ಸಾಧ್ಯವಿಲ್ಲ. 4 ವಾರ್ಡಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಬೇಕು. ಪಟ್ಟಣದಲ್ಲಿ ಒಟ್ಟು 6 ಅಧಿಕಾರಿಗಳನ್ನು ನೇಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಏನೇ ಸಮಸ್ಯೆ ಬಂದರೂ ಆಯಾ ಅಧಿಕಾರಿಯೇ ಹೊಣೆಗಾರರನ್ನಾಗಿ ಮಾಡಿ. ಪ್ರತಿವರ್ಷ ಪುರಸಭೆಗೆ ವಿವಿಧ ಮೂಲಗಳಿಂದ ಬರುವ ಆದಾಯ ಮತ್ತು ವೆಚ್ಚದ ಬಗ್ಗೆ ಹಾಗೂ ಕಳೆದ ಐದು ವರ್ಷಗಳಿಂದ ಮುಟೇಷನ್ ಎಷ್ಟು ಮಾಡಿದ್ದೀರಿ? ಅದರಿಂದ ಪುರಸಭೆಗೆ ಆದಾಯ ಎಷ್ಟು ಬಂದಿದೆ ಎಂಬುದರ ಮಾಹಿತಿ ನೀಡುವಂತೆ ತಿಳಿಸಿದರು.


ಪುರಸಭೆ ಸಿಎಒ ರಾಜಶೇಖರ ಪಾಟೀಲ್, ವ್ಯವಸ್ಥಾಪಕ ಹನುಮಂತ ನಾಯಕ, ಸ್ಯಾನಿಟರಿ ಇನ್ಸಪೆಕ್ಟರ್ ಶಹನವಾಜ್, ಜೆಇ ಅಸ್ಮಾ ಬೇಗಂ, ಆರ್‌ಐ ಫಯಾಜ್, ಎಫ್‌ಡಿಸಿ ಭಾಗ್ಯಜ್ಯೋತಿ, ಆರೋಗ್ಯ ನಿರೀಕ್ಷಕಿ ಸುಜಾತಾ, ಎಸ್‌ಡಿಎಗಳಾದ ಶಿವಲಿಂಗ ಮೇಗಳಮನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net