ಡಯಾಲಿಸೀಸ್ ಘಟಕಕ್ಕೆ ಶಾಸಕ ದಿಢೀರ್ ಭೇಟಿ

23 HANUR 3
ರಾಮಾಪುರ ಡಯಾಲಿಸಸ್ ಕೇಂದ್ರಕ್ಕೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಲಿಂಗೇಗೌಡ, ಗೋವಿಂದ, ಚಿನ್ನಸ್ವಾಮಿ ಇತರರು ಇದ್ದರು.
Published on

ಹನೂರು : ತಾಲೂಕಿನ ರಾಮಾಪುರ ಸಮುದಾಯದ ಆರೋಗ್ಯ ಕೇಂದ್ರದ ಡಯಾಲಿಸೀಸ್ ಘಟಕಕ್ಕೆ ಶುಕ್ರವಾರ ಶಾಸಕ ಎಂ.ಆರ್ ಮಂಜುನಾಥ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಆರಂಭಿಸಿರುವ ಡಯಾಲಿಸಸ್ ಕೇಂದ್ರದಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಕಳೆದ ನಾಲ್ಕೈದು ದಿನದ ಹಿಂದೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಅಗತ್ಯ ಸೇವೆ ಒದಗಿಸುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಜತೆಗೆ ಕೇಂದ್ರದಲ್ಲಿ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಮುತುರ್ವಜಿ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಿಂಗೇಗೌಡ, ಮುಖಂಡರಾದ ಗೋವಿಂದ, ಚಿನ್ನಸ್ವಾಮಿ, ಎಸ್.ಆರ್ ಮಹದೇವ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net